ಕಟೀಲು, ಸುಬ್ರಹ್ಮಣ್ಯದಲ್ಲಿ ಸೇವಾದರದಲ್ಲಿ ಭಾರೀ ಏರಿಕೆ; ನವರಾತ್ರಿ ಸಂದರ್ಭದಲ್ಲೇ ಭಕ್ತರಿಗೆ ಬಿಗ್ ಶಾಕ್!

0
233

ಬೆಂಗಳೂರು: ರಾಜ್ಯದಲ್ಲೇ ಅತೀ ಹೆಚ್ಚು ಆದಾಯಗಳ ಸಾಲಿನಲ್ಲಿ 1ನೇ ಮತ್ತು 4ನೇ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸೇವಾ ದರವನ್ನು ದೇವಸ್ಥಾನದ ಆಡಳಿತ ಮಂಡಳಿ ಶೇ.50-100ರಷ್ಟು ಏರಿಕೆ ಮಾಡಿ ಪರಿಷ್ಕರಿಸಿ ಭಕ್ತರಿಗೆ ಬಿಗ್ ಶಾಕ್‌ ನೀಡಿದೆ.
ಕಟೀಲು ದೇವಳದಲ್ಲಿ ಸೇವಾ ದರ (ಆವರಣದಲ್ಲಿ ಹಿಂದಿನ ದರ) ಪಂಚಕಜ್ಜಾಯ 40 ರೂ. (20 ರೂ.), ಲಡ್ಡು ಪ್ರಸಾದ 60 ರೂ.(20 ರೂ.), ಸೆಟ್ ಪ್ರಸಾದ 150 ರೂ. (100 ರೂ.), ತ್ರಿಮಧುರ ನೈವೇದ್ಯ 90 ರೂ. (60 ರೂ.), ಕಾರ್ತಿಕ ಪೂಜೆ 25 ರೂ. (10 ರೂ.), ಹೂವಿನ ಪೂಜೆ 220 ರೂ. (120 ರೂ.), ಕುಂಕು ಮಾರ್ಚನೆ 50 ರೂ.(30 ರೂ.), ದುರ್ಗಾ ನಮಸ್ಕಾರ 140 5. (60 5.), 2000 2. (1000 2.), 6000 5. (3,000), 450 ರೂ.(170 ರೂ.)ಗೆ ಏರಿಕೆ ಮಾಡ ಲಾಗಿದೆ. ಉಳಿದ ಸೇವೆಗಳಲ್ಲಿ 5.80-100 ಮಾಡಲಾಗಿದೆ. ಅ.1ರಿಂದ ಹೊಸ ಸೇವಾ ದರ ಜಾರಿಗೆ ಬರಲಿದ್ದು, ನವರಾತ್ರಿಗೆ ಭಕ್ತರಿಗೆ ಶಾಕ್ ನೀಡಲಿದೆ.

ಸುಬ್ರಹ್ಮಣ್ಯದಲ್ಲಿ 15 ವರ್ಷ ಬಳಿಕ ಸೇವೆ ದರ ಏರಿಕೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸೇವಾ ದರಗಳಲ್ಲಿ ಏರಿಕೆಯಾಗಿದ್ದು, ಪರಿಷ್ಕೃತ ದರ ಸೆ. 1ರಿಂದಲೇ ಜಾರಿಯಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ದೇವಸ್ಥಾನದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಕೆಲವು ಪ್ರಮುಖ ಸೇವೆಗಳ ದರ ಹೆಚ್ಚಿಸಲಾಗಿದೆ. 2010ರ ನವೆಂಬರ್‌ನಲ್ಲಿ ಕೊನೆಯ ಬಾರಿ ದರ ಪರಿಷ್ಕರಣೆ ಮಾಡಲಾಗಿತ್ತು. 15 ವರ್ಷ ಬಳಿಕ 40 ಸೇವೆಗಳ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ. ಪರಿಷ್ಕರಣೆ ದರ (ಆವರಣದಲ್ಲಿ ಹಳೆಯ ದರ): ಚಿಕ್ಕರಥೋತ್ಸವ 12,000 ರೂ. (8 ಸಾವಿರ ರೂ.), ಚಂದ್ರಮಂಡಲ ಉತ್ಸವ 9500 ರೂ. (6 ಸಾವಿರ ರೂ.), ಹೂವಿನ ತೇರಿನ ಉತ್ಸವ 8,700 (5 ಸಾವಿರ ರೂ.), ಬಂಡಿ ಉತ್ಸವ 4500 ರೂ. (3 ಸಾವಿರ ರೂ.), ಪಾಲಕಿ ಉತ್ಸವ 5,600 ರೂ.(2,500 ರೂ.) ಸೇರಿದಂತೆ ಒಟ್ಟು 40 ಸೇವೆಗಳ ದರವನ್ನು ಬದಲಾವಣೆ ಮಾಡಲಾಗಿದೆ.
ರಾಜ್ಯ ಸರಕಾರದ ಪಾತ್ರ ಇಲ್ಲ: ಸಚಿವ ರಾಮಲಿಂಗಾ ರೆಡ್ಡಿ
ಕಟೀಲು ದೇವಳಗಳಲ್ಲಿ ಸೇವಾ ದರ ಏರಿಕೆ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಇದರಲ್ಲಿ ರಾಜ್ಯ ಸರಕಾರದ ಪಾತ್ರವೇ ಇಲ್ಲ. ಸರಕಾರ ದರ ಏರಿಕೆಗೆ ಸೂಚನೆಯನ್ನೇ ನೀಡಿಲ್ಲ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಎ ಗ್ರೇಡ್ ದೇವಳಗಳಲ್ಲಿ ಸೇವಾ ದರ ಪರಿಷ್ಕರಣೆ ಮಾಡಬೇ ಕಾದರೆ ಅದರ ಅನಿವಾರ್ಯತೆ ತಿಳಿಸಿ ರಾಜ್ಯ ಧಾರ್ಮಿಕ ಪರಿಷತ್‌ನಿಂದ ಅನುಮೋದನೆ ಪಡೆದುಕೊಳ್ಳಬೇಕು. ಕಟೀಲು ದೇವಳ ವಿಚಾರದಲ್ಲಿ ಅನು ಮೋದನೆಯನ್ನೇ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here