ಉಡುಪಿ: ಚಿತ್ರಂಜನ್ ಸರ್ಕಲ್ ಬಳಿ ಇರುವ ಚಿನ್ನದ ಅಂಗಡಿಯಲ್ಲಿ ಸೆಪ್ಟೆಂಬರ್ 8 ರಂದು ರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಅಂತ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಲಾಪುರ ಜಿಲ್ಲೆಯ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್ ಶ್ರೀಮಂತ್(25) ಬಂಧಿತರು.
ಆರೋಪಿಗಳಿಂದ 74,88,000 ಲಕ್ಸ ಮೌಲ್ಯದ 748.8 ಗ್ರಾಂ ಚಿನ್ನ, 3,60,000 ಮೌಲ್ಯದ 4.4 ಕೆಜಿ ಬೆಳ್ಳಿ, ನಗದು ಹಣ ಐದು ಲಕ್ಷ ರೂ, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಕಾರು ಸೇರಿ ಒಟ್ಟು ರೂ 87,48,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ.
ಸೆ. 8ರಂದು ತಡರಾತ್ರಿ ಅಂಗಡಿಯ ಶಟರ್ ನ ಬಾಗಿಲಿನ ಬೀಗವನ್ನು ಯಾವುದೋ ಕೀ ಯನ್ನು ಉಪಯೋಗಿಸಿ ರಿಫೈನರಿ ಮಷಿನ್ ನಲ್ಲಿ ಇಟ್ಟಿದ್ದ ಸುಮಾರು 95,71,000 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

