ಮಗುವನ್ನು ನೀರಿನ ಡ್ರಮ್​​ನಲ್ಲಿ ಮುಳುಗಿಸಿ ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

0
223

ಮಹಾರಾಷ್ಟ್ರ,: ತಂದೆಯೊಬ್ಬ ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್​​ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅರ್ಧ ನೀರು ತುಂಬಿರುವ ಡ್ರಮ್​ನಲ್ಲಿ ಮಗುವನ್ನು ಎಸೆಯಲಾಗಿತ್ತು. ಬೀಡ್ ಜಿಲ್ಲೆಯ ಜಿಯೋರೈ ತಾಲ್ಲೂಕಿನ ತಲ್ವಾಡಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಡೈಪರ್ ಧರಿಸಿದ್ದ ಮಗು ನೀರಿನಲ್ಲಿ ಮುಖ ಕೆಳಗಾಗಿ ಮಲಗಿತ್ತು, ಪಕ್ಕದಲ್ಲಿ ಪ್ಲಾಸ್ಟಿಕ್ ಗುಲಾಬಿ ಮಗ್ ತೇಲುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದು. ಆ ವ್ಯಕ್ತಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ, ಅಮೋಲ್ ಮತ್ತು ಆತನ ಪತ್ನಿ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಅವರನ್ನು ರಕ್ಷಿಸಲಾಗಿತ್ತು.ದಂಪತಿಯನ್ನು ಗುರುವಾರ ಸ್ಥಳೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅಮೋಲ್ ಮತ್ತು ಅವರ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಲ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here