ಸಜಿಪಮೂಡ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸೋಮವಾರದಂದು ಆಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಜೀಪ ಮುನ್ನುರು 2025 -26 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಕ್ಕಳ ಪ್ರತಿಭೆಗೆ ಕೊರತೆ ಭಾರದ ರೀತಿಯಲ್ಲಿ ಶಾಲೆಗೆ ಊರಿಗೆ ಹೆತ್ತವರಿಗೆ ಒಳ್ಳೆಯ ಕೀರ್ತಿ ಬರುವಂತೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಇಲಾಖೆಯ ನಿರ್ದೇಶನದಂತೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂಬುದಾಗಿ ಶುಭ ಹಾರೈಸಿದರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ. ಸಿಆರ್‌ಪಿ ಇಂದಿರಾ ಶಾಲಾ ಮುಖ್ಯೋಪಾಧ್ಯಾ ಯಿನಿ ರೋಹಿಣಿ. ಉದ್ಯಮಿ ಕಬೀರ. ಹಾಗೂ ಅಬ್ದುಲ್ ಕೇರಿಂ. ಪಂಚಾಯಿತಿ ಸದಸ್ಯರಾದ ಶಶಿಕಲಾ. ಸುಂದರ ಪೂಜಾರಿ. ಮೊದಲಾದವರು ಭಾಗವಹಿಸಿದ್ದರು 14 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.

