ಮುಂಬಯಿ, ನ. 27- ಎರ್ಮಾಳು ತೆಂಕ – ಬಡಾ ಜೋಡುಕರೆ ಕಂಬಳ -2026 ಸಮಿತಿಯ ಸಮಾಲೋಚನಾ ಸಭೆಯು, ಮುಂಬಯಿಯಲ್ಲಿರುವ ಎರ್ಮಾಳು ತೆಂಕ ಮತ್ತು ಎರ್ಮಾಳು ಬಡಾ ಗ್ರಾಮಸ್ಥರು ಮತ್ತು ಕಂಬಳಾಭಿಮಾನಿಗಳೊಂದಿಗೆ ನ. 30 ರ ಅದಿತ್ಯವಾರದಂದು ಸಂಜೆ 4:00 ಗಂಟೆಗೆ ಅಂಧೇರಿ ಪೂರ್ವದಲ್ಲಿರುವ ಸಾಯಿ ಪ್ಯಾಲೇಸ್ ಹೊಟೇಲ್‌ನಲ್ಲಿ ಸಂಜೆ 4:00ಕ್ಕೆ ಸರಿಯಾಗಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಾಗೂ ಮುಂಬಯಿ ಸಮಿತಿಯ ಅಧ್ಯಕ್ಷ ಎರ್ಮಾಳು ಹರೀಶ್ ಶೆಟ್ಟಿ ಉಪಸ್ಥಿತಿಯಲ್ಲಿ ಜರಗಲಿದೆ.
ಈ ಸಮಾಲೋಚನಾ ಸಭೆಯಲ್ಲಿ ಎರ್ಮಾಳು ತೆಂಕ, ಎರ್ಮಾಳು ಬಡಾ, ಪಡುಬಿದ್ರಿ, ಉಚ್ಚಿಲ, ಕಾಪು, ಕಟಪಾಡಿ, ಪಾಂಗಾಳ, ಶಿರ್ವ, ಮಂಚಕಲ್ ಪರಿಸರದ ಹಾಗೂ ಆಸುಪಾಸಿನ ಕಂಬಳಾಭಿಮಾನಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಸಲಹೆ – ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ಕಂಬಳಾ ಸಮಿತಿಯ ಗೌರವ ಅಧ್ಯಕ್ಷ ಅಶೋಕ್‌ರಾಜ್ ಎರ್ಮಾಳು ಬೀಡು, ಗೌರವ ಕಾರ್ಯಾಧ್ಯಕ್ಷ ಸೀತಾರಾಮ ಎಲ್. ಶೆಟ್ಟಿ ಪುಚೊಟ್ಟು ಬೀಡು, ಗೌ. ಪ್ರ. ಕಾರ್ಯದರ್ಶಿ ಸುರೇಶ್ ಗೋಪಾಲ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಮುಂಬಯಿ ಸಮಿತಿ ಎರ್ಮಾಳ್ ಡಾ. ಚಿಂತನ್ ಹೆಗ್ಡೆ, ಗೌ. ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಎಲ್. ಶೆಟ್ಟಿ ಪುಳ್ಕೊಟ್ಟು ಬೀಡು, ಕಾರ್ಯದರ್ಶಿ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ ಹಾಗೂ ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

