ಬೆಳ್ವೆ: ಎನ್ಎನ್ಓ ವತಿಯಿಂದ ಸನ್ಮಾನ ಸಮಾರಂಭ

0
77


ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಸನ್ಮಾನ ಸಮಾರಂಭ ಬೆಳ್ವೆ ಶ್ರೀ ಸಂದೇಶ್ ಕಿಣಿ ಮೆಮೋರಿಯಲ್ ಸಬಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ ಮುಖ್ಯ ಶಿಕ್ಷಕ ವೈ ಪಟ್ಟಾಬಿರಾಮ್ ಭಟ್ ಬೆಳ್ವೆ ಮುಸ್ತಾಕ್ ಹೆನ್ನಾಬೈಲ್ , ಸಾಹಿತಿಗಳು ಕುಂದಾಪುರ ಫೀರ್ ಸಾಹೇಬ್ ಉಡುಪಿ ಕೋಶಾಧಿಕಾರಿ , ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ , ಮುನಾವರ್ ಅಜೆಕಾರು ಉಪಾಧ್ಯಕ್ಷರು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು .2025- 26ನೇ ಸಾಲಿನ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಸರಸ್ವತಿ , ಮುಖ್ಯ ಶಿಕ್ಷಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮರೂರು , ದಕ್ಷಿಣ ಭಾರತ ಕರಾಟೆ ಚಾಂಪಿಯನ್ ವಿಜೇತ ವಿದ್ಯಾರ್ಥಿ ಅಬ್ದುಲ್ ಮಲಿಕ್ ,2024-25ನೇ ಸಾಲಿನ ಸಿ. ಎ ಪರೀಕ್ಷೆಯಲ್ಲಿ ಉತೀರ್ಣಗೊಂಡ ವಿದ್ಯಾರ್ಥಿಗಳಾದ ಶೇಖ್ ಅಬ್ದುಲ್ ಝಾಹಿದ್ ಹಾಗೂ ಶಾಹುಲ್ ಹಮೀದ್ ಅಜೆಕಾರು ರವರನ್ನು ಸನ್ಮಾನಿಸಲಾಯಿತು.ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ , ಹೆಬ್ರಿ ಘಟಕದ ಉಪಾಧ್ಯಕ್ಷ ಸಮದ್ ಹೈಕಾಡಿ, ಅನ್ಸಾರ್ ಹೊಸಂಗಡಿ, ಜಿಲ್ಲಾ ಸಮಿತಿ ಸದಸ್ಯ ಹರೂನ್ ರಶೀದ್ ಸಾಸ್ತಾನ , ಶಾಕಿರ್ ಹಾವಂಜೆ ,ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ ,ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ , ಶರೀಫ್ ಸಾಹೇಬ್ ಬೆಳ್ವೆ ಮುಂತಾದವರು ಉಪಸ್ಥಿತರಿದ್ದರು. ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಸಹಕರಿಸಿದರು. ಮೊಹಮ್ಮದ್ ರಬಿ ಕಿರಾತ್ ಪಠಿಸಿದರು.ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.ಅರಾಫತ್ ಸ್ವಾಗತಿಸಿ ವಂದಿಸಿದರು. ಬೆಳ್ವೆ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿದರು.

LEAVE A REPLY

Please enter your comment!
Please enter your name here