ಮೂಡುಬಿದಿರೆ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟ

0
84

ಗ್ರಾಮ ಪಂಚಾಯತಿಗಳಿಗೆ ರಾಜ್ಯದಲ್ಲಿ ಚುನಾವಣೆಯನ್ನು ನಡೆಸುವ ಇಂಗಿತವನ್ನು ಸರಕಾರ ವ್ಯಕ್ತಪಡಿಸುತ್ತಿದ್ದಂತೆ ಚುನಾವಣಾ ಪೂರಕ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗಗಳನ್ನು ಮತ್ತು ಕ್ಷೇತ್ರವಾರು ಸದಸ್ಯ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ.

ಮೂಡುಬಿದ್ರಿ ತಾಲೂಕಿನ ಗ್ರಾಮ ಪಂಚಾಯತಿಗಳ ಒಟ್ಟಾರೆ ಮೀಸಲಾತಿ ಈ ರೀತಿ ಇದೆ

* ನೆಲ್ಲಿಕಾರು ಗ್ರಾಮ ಪಂಚಾಯತ್ ಗಳಲ್ಲಿರುವ 12 ಸದಸ್ಯ ಸ್ಥಾನಗಳಲ್ಲಿ ನಾಲ್ಕು ಸಾಮಾನ್ಯರಿಗೆ, ಎರಡು ಸಾಮಾನ್ಯ ಮಹಿಳೆಗೆ, ಒಂದು ಹಿಂ ವರ್ಗ ಬಿ, ಎರಡು ಹಿಂದುಳಿದ ವರ್ಗ ಎ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆಗೆ, ಒಂದು ಅನುಸೂಚಿತ ಜಾತಿ ಮಹಿಳೆ ಹಾಗೂ ಒಂದು ಸ್ಥಾನವನ್ನು ಅನುಸೂಚಿತ ಜಾತಿಗೆ ಪ್ರಕಟಿಸಲಾಗಿದೆ.

* ದರೆಗುಡ್ಡೆ ಗ್ರಾಮ ಪಂಚಾಯತದ ಲ್ಲಿರುವ 12 ಸದಸ್ಯ ಸ್ಥಾನಗಳಲ್ಲಿ ನಾಲ್ಕು ಸಾಮಾನ್ಯರಿಗೆ, ಎರಡು ಸಾಮಾನ್ಯ ಮಹಿಳೆ, ಒಂದು ಹಿಂದುಳಿದ ವರ್ಗ ಬಿ,ಎರಡು ಹಿಂದುಳಿದ ವರ್ಗ ಏ ಮಹಿಳೆ, ಒಂದು ಹಿಂದುಳಿದ ವರ್ಗ ಎ, ಒಂದು ಅನುಸೂಚಿತ ಪಂಗಡ ಮಹಿಳೆ, ಒಂದು ಅನುಸೂಚಿತ ಜಾತಿ ಮಹಿಳೆಗೆ ಮೀಸಲಿರಿಸಲಾಗಿದೆ.

* ಪಡುಮಾರ್ನಾಡು ಗ್ರಾಮ ಪಂಚಾಯತದ 18ಸದಸ್ಯ ಸ್ಥಾನಗಳಲ್ಲಿ 5 ಸಾಮಾನ್ಯರಿಗೆ, ನಾಲ್ಕು ಸಾಮಾನ್ಯ ಮಹಿಳೆಗೆ, ಒಂದು ಹಿಂದುಳಿದ ವರ್ಗ ಬಿ ಮಹಿಳೆಗೆ, ಎರಡು ಹಿಂದುಳಿದ ವರ್ಗ ಎ ಮಹಿಳೆಗೆ, ಮೂರು ಹಿಂದುಳಿದ ವರ್ಗ ಎ, ಒಂದು ಅನುಸೂಚಿತ ಪಂಗಡ ಮಹಿಳೆಗೆ, ಒಂದು ಅನುಸೂಚಿತ ಜಾತಿ ಮಹಿಳೆಗೆ, ಒಂದು ಅನುಸೂಚಿತ ಜಾತಿಗೆ ನಿಗದಿಪಡಿಸಲಾಗಿದೆ.

* ಬೆಳುವಾಯಿ ಗ್ರಾಮ ಪಂಚಾಯತದ 26 ಸದಸ್ಯ ಸ್ಥಾನಗಳಲ್ಲಿ ಎರಡು ಅನುಸೂಚಿತ ಜಾತಿ, ಎರಡು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ, ಒಂದು ಅನುಸೂಚಿತ ಪಂಗಡ ಮಹಿಳೆ, ಮೂರು ಹಿಂದುಳಿದ ವರ್ಗ ಎ, ಮೂರು ಹಿಂದುಳಿದ ವರ್ಗ ಎ ಮಹಿಳೆ, ಒಂದು ಹಿಂದುಳಿದ ವರ್ಗ ಬಿ ಮಹಿಳೆ, ಏಳು ಸಾಮಾನ್ಯ, ಆರು ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.

* ಪಾಲಡ್ಕ ಗ್ರಾಮ ಪಂಚಾಯತದ 16 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ, ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಎರಡು ಹಿಂದುಳಿದ ವರ್ಗ ಎ, 2 ಹಿಂದುಳಿದ ವರ್ಗ ಎ ಮಹಿಳೆ, ಒಂದು ಬಿ ಮಹಿಳೆ, ೫ ಸಾಮಾನ್ಯ, ೩ ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ.

* ಕಲ್ಲಮುಂಡ್ಕೂರು ಗ್ರಾಮ ಪಂಚಾಯತದ 16 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಎರಡು ಹಿಂದುಳಿದ ವರ್ಗ ಎ, ಎರಡು ಹಿಂದುಳಿದ ವರ್ಗ ಎ ಮಹಿಳೆ, ಒಂದು ಬಿ ಮಹಿಳೆ, ಆರು ಸಾಮಾನ್ಯ, ಮೂರು ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ.

* ಪುತ್ತಿಗೆ ಗ್ರಾಮ ಪಂಚಾಯತದ 21 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ, ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ, ಒಂದು ಅನುಸೂಚಿತ ಪಂಗಡ ಮಹಿಳೆ, ಮೂರು ಹಿಂದುಳಿದ ವರ್ಗ ಎ, ಎರಡು ಹಿಂದುಳಿದ ವರ್ಗ ಎ ಮಹಿಳೆ, 5 ಸಾಮಾನ್ಯ 6 ಸಾಮಾನ್ಯ ಮಹಿಳೆಗೆ ನೀಡಲಾಗಿದೆ.

* ತೆಂಕಮಿಜಾರು ಗ್ರಾಮ ಪಂಚಾಯತದ 22 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಮೂರು ಹಿಂದುಳಿದ ವರ್ಗ ಎ, 3 ಹಿಂದುಳಿದ ವರ್ಗ ಎ ಮಹಿಳೆ, ಒಂದು ಬಿ ಮಹಿಳೆ, 8 ಸಾಮಾನ್ಯ, 5 ಸಾಮಾನ್ಯ ಮಹಿಳೆಗೆ ನೀಡಲಾಗಿದೆ.

* ಹೊಸಬೆಟ್ಟು ಗ್ರಾಮ ಪಂಚಾಯತದ 11 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಎರಡು ಹಿಂದುಳಿದ ವರ್ಗ ಎ ಮಹಿಳೆ, ಒಂದು ಹಿಂದುಳಿದ ವರ್ಗ ಬಿ, ನಾಲ್ಕು ಸಾಮಾನ್ಯ, 2 ಸಾಮಾನ್ಯ ಮಹಿಳೆಗೆ ನೀಡಲಾಗಿದೆ.

* ಇರುವೈಲು ಗ್ರಾಮ ಪಂಚಾಯತದ 15 ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಎರಡು ಹಿಂದುಳಿದ ವರ್ಗ ಎ, 2 ಹಿಂದುಳಿದ ವರ್ಗ ಮಹಿಳೆ, ಒಂದು ಬಿ ಮಹಿಳೆ, ೫ ಸಾಮಾನ್ಯ, ೩ ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ.

* ಶಿರ್ತಾಡಿ ಗ್ರಾಮ ಪಂಚಾಯತದ ೧೫ ಸದಸ್ಯ ಸ್ಥಾನಗಳಲ್ಲಿ ಒಂದು ಅನುಸೂಚಿತ ಜಾತಿ, ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಒಂದು ಹಿಂದುಳಿದ ವರ್ಗ ಎ, ಒಂದು ಹಿಂದುಳಿದ ವರ್ಗ ಎ ಮಹಿಳೆ, ಒಂದು ಹಿಂದುಳಿದ ವರ್ಗ ಬಿ, ನಾಲ್ಕು ಸಾಮಾನ್ಯ, ನಾಲ್ಕು ಸಾಮಾನ್ಯ ಮಹಿಳೆಗೆ ನೀಡಲಾಗಿದೆ.

* ವಾಲ್ಪಾಡಿ ಗ್ರಾಮ ಪಂಚಾಯತದ 9 ಸದಸ್ಯ ಸ್ಥಾನಗಳಲ್ಲಿ ಮೂರು ಸಾಮಾನ್ಯ, ಎರಡು ಸಾಮಾನ್ಯ ಮಹಿಳೆ, ಒಂದು ಅನುಸೂಚಿತ ಜಾತಿ ಮಹಿಳೆ, ಒಂದು ಅನುಸೂಚಿತ ಪಂಗಡ ಮಹಿಳೆ, ಒಂದು ಹಿಂದುಳಿದ ವರ್ಗ ಎ, ಒಂದು ಹಿಂದುಳಿದ ವರ್ಗ ಎ ಮಹಿಳೆಗೆ ನಿಗದಿಪಡಿಸಲಾಗಿದೆ.