ಬೆಂಗಳೂರು ಅಲಯನ್ಸ್ ಯುನಿವರ್ಸಿಟಿಯಲ್ಲಿ ರಾಷ್ಟ್ರಮಟ್ಟದ ತುಳು ವಿಚಾರ ಸಂಕಿರಣ

0
86

ತುಳುವರ್ಲ್ಡ್ ಫೌಂಡೇಶನ್ ಕಟೀಲು, ಮಂಗಳೂರು — ಇದು ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ 2026 ಜನವರಿ 9 ಮತ್ತು 10 ರಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ತುಳು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.

ಈ ಸಂಕಿರಣದ ಪ್ರಮುಖ ವಿಷಯ:
“ತುಳುನಾಡಿನ ಆದಿಮೂಲ ದೈವೊಲು, ಬೆರ್ಮೆರ್ ಬೊಕ್ಕ ಲೆಕ್ಕೇಸಿರಿ : ಮೂಲ ಪರಿಕಲ್ಪನೆಲೆನ್ ಮಿತ್ತ್ ಒಂಜಿ ಅಧ್ಯಯನ”

ಈ ಸಂವಾದದಲ್ಲಿ ದೈವ.ಮೂಲ, ನಾಗಮೂಲ ಮತ್ತು ನೆಲಮೂಲ ಪರಿಕಲ್ಪನೆಗಳ ಕುರಿತು ಸಮಗ್ರ ವಿಚಾರ ಮಂಡನೆ ನಡೆಯಲಿದ್ದು, ತುಳುನಾಡಿನ ಆದಿಮೂಲ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಗಂಭೀರ ಅಧ್ಯಯನಕ್ಕೆ ವೇದಿಕೆ ಸಿದ್ದಗೊಂಡಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಂದ ವಿದ್ವಾಂಸರು, ಜಾನಪದ ಸಂಶೋಧಕರು, ಸಾಹಿತ್ಯ ಹಾಗೂ ಸಂಸ್ಕೃತಿ ಚಿಂತಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮೂಲ ಪರಿಕಲ್ಪನೆಗಳ ಮೇಲಿನ ಸಂಶೋಧನಾ ಲೇಖನಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಲೇಖನಗಳಿಗೆ ಸಂಕಿರಣದಲ್ಲಿ ಮಂಡನೆಗೆ ಅವಕಾಶ ನೀಡಲಾಗುತ್ತದೆ ಎಂದು ತುಳುವರ್ಲ್ಡ್ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ. ಸಂಕಿರಣದಲ್ಲಿ ಭಾಗವಹಿಸಲು ಅಥವಾ ಪೇಪರ್ ಪ್ರಸೆಂಟೇಶನ್ ಮಾಡಲು ಆಸಕ್ತಿ ಹೊಂದಿರುವವರು ತಮ್ಮ ವಿವರಗಳನ್ನು ಕೆಳಗಿನ ವಾಟ್ಸಪ್ ಸಂಖ್ಯೆ ಅಥವಾ ಇಮೇಲ್ ವಿಲಾಸಕ್ಕೆ ಕಳುಹಿಸಲು ವಿನಂತಿಸಲಾಗುತ್ತದೆ:WhatsApp Number: 9061086101, tuluworld@gmail.com

ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅಲಯನ್ಸ್ ಯುನಿವರ್ಸಿಟಿ ಮತ್ತು ತುಳುವರ್ಲ್ಡ್ ಫೌಂಡೇಶನ್ ಇವರಿಂದ ಪ್ರಮಾಣ ಪತ್ರ ಲಭಿಸುತ್ತದೆ. ಪ್ರಮಾಣ ಪತ್ರ ತಯಾರಿಕೆಗೆ ಅಗತ್ಯವಾದ —ನಿಮ್ಮ ಫೋಟೋ, ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಮೇಲಿನ ವಾಟ್ಸಪ್ ಅಥವಾ ಇಮೇಲ್ ವಿಳಾಸಕ್ಕೆ ಡಿಸೆಂಬರ್ 16, 2025ರ ಮುಂಚಿತವಾಗಿ ಕಳುಹಿಸಿಕೊಡಬೇಕಾಗಿ ವಿನಂತಿ.

ನಿಮ್ಮ ಸಕ್ರಿಯ ಸಹಭಾಗಿತ್ವ ಮತ್ತು ಸಂಶೋಧನಾ ಕೊಡುಗೆ ಈ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಯಶಸ್ಸಿಗೆ ಪ್ರಮುಖವಾಗಲಿದೆ ಎಂದು ನಾವು ಭಾವಿಸುತ್ತೇವೆ.

– ತುಳುವರ್ಲ್ಡ್ ಫೌಂಡೇಶನ್

LEAVE A REPLY

Please enter your comment!
Please enter your name here