ಶ್ರೀ ಶ್ರೀ ಭಿಕ್ಷು ಸ್ಮಾರಕಕ್ಕೆ “ಪ್ರಾರ್ಥನಾ ಮಂಟಪ “ಸಮರ್ಪಣೆ ಆಮಂತ್ರಣ ಪತ್ರಿಕೆ ಎಡನೀರು ಶ್ರೀ ಗಳಿಂದ ಬಿಡುಗಡೆ

0
118

ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ನಾಗರಕಟ್ಟೆ ಯಲ್ಲಿ –ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಸಾರತ್ಯದ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇವರು ಸನತ್ ಕುಮಾರ್ ಬಿ. ಇ. ಮತ್ತು ಕಾರ್ತಿಕ್ ಕಾಸರಗೋಡು ಇವರ ಆರ್ಥಿಕ ಸಹಕಾರದಲ್ಲಿ ನಿರ್ಮಿಸಿ ನೀಡುತ್ತಿರುವ “ಪ್ರಾರ್ಥನಾ ಮಂಟಪ “ದ ಆಮಂತ್ರಣ ಪತ್ರಿಕೆಯನ್ನು ಶ್ರೀಮದೆಡನೀರು ಮಠಾದೀಶ ರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಗಳವರು ಶ್ರೀ ಮಠದಲ್ಲಿ ಬಿಡುಗಡೆ ಗೊಳಿಸಲಾಯಿತು. 4.12.2025ಗುರುವಾರ ಸಂಜೆ 4ಕ್ಕೆ ಶ್ರೀ ಶ್ರೀ ಸಚ್ಚಿದಾನಂದ ಭಾರತೀಸ್ವಾಮಿಗಳವರು ದೀಪ ಬೆಳಗಿಸಿ “ಪ್ರಾರ್ಥನಾ ಮಂಟಪ “ಉದ್ಘಾಟಿಸಲಿರುವರು. ಕನ್ನಡ ಭವನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳು ಶ್ರೀ ಶಾರದಾ ಭಜನಾಶ್ರಮ ಸಮಿತಿ ಅಧ್ಯಕ್ಷ ಶ್ರೀ ಚಂದ್ರಕಾಂತ ಮತ್ತು ಸಮಿತಿಗೆ “ನೂತನ ಪ್ರಾರ್ಥನಾ ಮಂಟಪ ” ಸಮರ್ಪಿಸುವರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪಾಧ್ಯಕ್ಷರಾದ ನಾಗರಾಜ್ ಕಾಮಧೇನು ಕುಂದಾಪುರ ಪ್ರಾರ್ಥನಾ ಮಂಟಪ ಲೋಕಾರ್ಪಣೆ ಮಾಡಲಿರುವರು. ಕಾರ್ಯಕ್ರಮ ದಲ್ಲಿ ಕನ್ನಡ ಭವನದ ಹಿತೈಷಿಗಳು, ಪಧಾಧಿಕಾರಿಗಳು ಭಾಗವಹಿಸಿ ಶ್ರೀ ಶ್ರೀ ಭಿಕ್ಷು ಪ್ರತಿಮೆಗೆ ಹಾರಾರ್ಪಣೆ ಮಾಡಲಿರುವರು. ಎಂದು ಕನ್ನಡ ಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here