ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ ೨೫ ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ಈ ತಿಂಗಳ ಪೂಜಾ ಸೇವೆಯನ್ನು ಶ್ರೀ ಗಾಯತ್ರಿ ಪರಿವಾರದ ಸಂಚಾಲಕರಾದ ಭಾವನ್ನಾರಾಯಣ ಮತ್ತು ಕುಟುಂಬ ಸೇರಿದಂತೆ ಪರಿವಾರದ ಸಂಚಾಲಕರಾದ ಆರ್.ಎಂ. ಸತೀಶ್, ಶ್ರೀಮತಿ ಕಲ್ಪನಾ ರೇವಣಸಿದ್ದಪ್ಪ, ಶ್ರೀಮತಿ ಲತಾ ಮಂಜುನಾಥ್, ಸತ್ಯನಾರಾಯಣ ಮೂರ್ತಿ, ವಿ. ಕೃಷ್ಣಮೂರ್ತಿ, ಮಾಲತೇಶ್ ಕುಲಕರ್ಣಿ, ಪಿ.ಶಾಂತಕುಮಾರ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

