ಬಿಜೆಪಿ ಶಾಸಕರ ಭೇಟಿ
ಮಣಿಪಾಲ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊರಗ ಯುವಜನರ ನೇರ ನೇಮಕಾತಿಗಾಗಿ ಅಹೋರಾತ್ರಿ ಧರಣಿಯು 23 ನೇ ದಿನದತ್ತ ಮುಂದುವರಿಯುತ್ತಿದ್ದು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳಿ ಮತ್ತು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಸಮುದಾಯದ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕ ಕೆ. ಪುತ್ರನ್ ಹೆಬ್ರಿ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಶೀನ ಬೆಳ್ಮಣ್, ಶಕುಂತಲಾ ನೇಜಾರು, ಸಂಜೀವ ಬಾರ್ಕುರು, ನಾಗು ನಾಡ, ಪ್ರವೀಣ್ ಹೆಬ್ರಿ, ನರಸಿಂಹ ಪೆರ್ಡೂರು, ಭಾರತಿ ಎಲ್ಲೂರು ಮತ್ತು ಇತರರು ಹಾಜರಿದ್ದರು.

