ಉಡುಪಿ: ಕುಂತಳನಗರದಲ್ಲಿ ರಾತ್ರಿ ಹೊತ್ತು ತಿರುಗಾಡುತ್ತಿದ್ದ ಮನೋರೋಗಿ ಯುವತಿಯನ್ನು ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ರಸಲಾಗಿದ್ದು, ಸಖಿ ಸೆಂಟರಿಗೆ ದಾಖಲಿಸಿ, ತದನಂತರ ಬಾಳಿಗಾ ಆಸ್ಪತ್ರೆಗೆ ಸೇರಿಸಲಾಗಿದೆ.
ಗುಜರಾತ್ ಮೂಲದ ಯುವತಿ ಶ್ಯಾಮಿಲಿ (20) ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದು, ಕೌಟುಂಬಿಕ ಕಲಹ ಮತ್ತು ದೌರ್ಜನ್ಯಕ್ಕೆ ತುತ್ತಾಗಿ ಮನೋರೋಗಿಯಾಗಿದ್ದಾಳೆ. ಯುವತಿ ಸಖಿ ಸೆಂಟರಿನಲ್ಲಿ ಬಹಳ ರಂಪಾಟ ನಡೆಸಿದ್ದು, ಹತೋಟಿಗೆ ತರಲು ಅಸಾಧ್ಯವಾದಾಗ ವಿಶು ಶೆಟ್ಟಿ ಅಂಬಲಪಾಡಿ ತಡರಾತ್ರಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆಗೆ 6 ತಿಂಗಳ ಮಗು ಇರುವ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಮಗು ಹಾಗೂ ನಾನು ಪ್ರೀತಿಸಿದ ಯುವಕನ ಜೊತೆ ಬದುಕಲು ಅವಕಾಶ ಮಾಡಿಕೊಡಬೇಕು ನಾನೇನು ಅಪ್ರಾಪ್ತೆಯಲ್ಲ ಎಂದು ಯುವತಿ ತಿಳಿಸಿದ್ದಾಳೆ. ಇದೀಗ ಪೊಲೀಸರು ಹಾಗೂ ಸಖಿ ಸೆಂಟರಿನ ಸಿಬ್ಬಂದಿ ಯುವತಿಯ ಗುಜರಾತ್ ಬಂಧುಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಕಟ್ಪಾಡಿಯ ಸಾಮಾಜಿಕ ಕಾರ್ಯಕರ್ತೆ ಶಕೀಲಾ ಹಾಗೂ ಕಾಪು ಠಾಣೆಯ ಉದಯ್, ಅರುಣ್ ಹಾಗೂ ಲಿಂಗಪ್ಪಗೌಡ ಸಹಕರಿಸಿದ್ದಾರೆ.

