ಅತ್ತಾವರದಲ್ಲಿರುವ ಹೋಟೆಲ್ ಅವತಾರ್ ಫ್ಲೆಕ್ಸಿ ಹಾಲ್ ಲ್ಲಿ ಅದ್ದೂರಿಯಾಗಿ ನೆರವೇರಿತು ಗಾನಲಹರಿ ತಂಡದ ಸಂಸ್ಥಾಪಕಿ ಸರೋಜಾ ರಾವ್ ಆಯೋಜಿಸಿದ್ದ ಕಾರ್ಯಕ್ರಮ ತಂಡದ ಸಲಹೆಗಾರ ಹಾಗೂ ಶಾನ ಸೌಂಡ್ಸ್ ನ ಮಾಲಕ ಶ್ರೀ ಸಂತೋಷ್ ಅಂಚನ್ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಕ್ಯಾತ ನ್ಯಾಯವಾದಿ , ಗೀತರಚನಗಾರ ಮತ್ತು ನಾಟಕಗಾರ ಶಶಿರಾಜ್ ಕಾವೂರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ತಂಡದ ಹಿರಿಯ ಸದಸ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗಾಯನವೆಂದರೆ ಮನಸಿಗೆ ಆದ ಗಾಯಕ್ಕೆ ದಿವ್ಯ ಔ ಷದ ಹಾಗೂ ಅವಕಾಶಕ್ಕಾಗಿ ಕಾಯಬಾರದು ಅವಕಾಶ ನಾವಾಗಿಯೇ ರೂಪಿಸಿಕೊಳ್ಳಬೇಕು ಎಂಬ ಹಿತನುಡಿಗನ್ನಾಡಿ ಅವರು ಹಾಡಿ ಶುಭ ಹಾರೈಸಿದರು ತಂಡದ ಸದಸ್ಯರೆಲ್ಲ ಸೇರಿ ಆಹ್ವಾನಿತ ಅತಿಥಿಯನ್ನು ಗೌರವಿದರು.
ಇನ್ನೊಬ್ಬ ಅತಿಥಿ ಗಾಯಕ ದಿನೇಶ್ ಕಿನ್ನಿಗೋಳಿ ಇವರನ್ನೂ ಸನ್ಮಾನಿಸಲಾಯಿತು ತಂಡದ ಹಿರಿಯ ಸದಸ್ಯರನ್ನು ಗೌರವದಿಂದ ಸನ್ಮಾನಿಸಲಾಯಿತು. ಸುಸ್ರವ್ಯವಾದ ಸಂಗೀತ ರಸಮಂಜರಿ ನೃತ್ಯ spot ಗೇಮ್ಸ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಭಾಗವಾಹಿದ ಎಲ್ಲಾ ಗಾಯಕರಿಗೆ ಗೌರವ ಸ್ಮರಣಿಕೆ ನೀಡಲಾಯಿತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದ್ದ ಕಾರ್ಯಕ್ರಮದಲ್ಲಿ ತಂಡದ ನಾಯಕಿ ಸರೋಜಾ ರಾವ್ ಪತಿ ಆರ್ ಕಮಲಾಕರ್ ಸೇರಿದಂತೆ ತಂಡದ ಸದಸ್ಯರಾದ ಮುರಳೀಧರ್ ಕಮತ್, ಕಿಶೋರ್ ಕುಮಾರ್, ಮನೋಹರ್ ಕುಮಾರ್ ಸೇರಿದಂತೆ ತಂಡದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಕೊಂಡಿತು.

