ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ವಿಜಯಲಕ್ಷ್ಮಿ ಯುವಕ ಸಂಘ(ರಿ.) ನರಿಕೊಂಬು ಇದರ ನೂತನ ಪದಾಧಿಕಾರಿಗಳ ಆಯ್ಕೆ ಜನವರಿ 7 ಬುಧವಾರ ನಡೆದ ಸಂಘದ ಸಭೆಯಲ್ಲಿ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಸಾದ್ ಗಾಣಿಗ ಕರ್ಬೆಟ್ಟು, ಉಪಾಧ್ಯಕ್ಷರಾಗಿ ರಾಜೇಶ್ ನಿರ್ಮಾಲ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಅಂತರ, ಜೊತೆ ಕಾರ್ಯದರ್ಶಿಯಾಗಿ ಉಮೇಶ್ ಟೈಲರ್, ಕೋಶಾ ಧಿಕಾರಿಯಾಗಿ ಮಾಧವ ಕರ್ಬೆಟ್ಟು, ಗೌರವ ಅಧ್ಯಕ್ಷರಾಗಿ ಹರೀಶ್ ಟೈಲರ್, ಜಗನ್ನಾಥ ಬಂಗೇರ ನಿರ್ಮಾಲ್, ಜಿತೇಂದ್ರ ಜೆ ಸುರ್ವಣ, ಗೌರವ ಸಲಹೆಗಾರರಾಗಿ ಗಿರೀಶ್ ಪೂಜಾರಿ ಬಸ್ರ ಆಯ್ಕೆಯಾಗಿದ್ದಾರೆ.

