ಬೆಂಗಳೂರು : ತುಳು ಸಂಸ್ಕೃತಿಯ ಅನನ್ಯ ಆರಾಧನೆಗಳ ಕುರಿತು ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ವಿಚಾರಗೋಷ್ಠಿ

0
42

ವರದಿ ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

​ತುಳುನಾಡು : ತುಳುವರ್ಲ್ಡ್ ಫೌಂಡೇಶನ್ ಮತ್ತು ಅಲಯನ್ಸ್ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ “ಬೆಮ್ಮರ್ ಮತ್ತು ಲೆಕ್ಕೆಸಿರಿ – ವಿವಿಧ ದೃಷ್ಟಿಕೋನಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯು ಅಲಯನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

​ಉದ್ಘಾಟನೆ ಮತ್ತು ಆಶಯ ಭಾಷಣ:

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟಾರ್ ಜನರಲ್ ಸುರೇಖಾ ಶೆಟ್ಟಿ ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ , ಪ್ರಾದೇಶಿಕ ಸಂಸ್ಕೃತಿ ಮತ್ತು ನಂಬಿಕೆಗಳ ಅಧ್ಯಯನವು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಯ ಅವಿಭಾಜ್ಯ ಅಂಗವಾಗಬೇಕು ಎಂದು ಆಶಿಸಿದರು. ಪ್ರಾದೇಶಿಕ ಭಾಷೆಗಳ ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯ ಸಹಕಾರ ನೀಡಲಿದೆ ಎಂದರು.

ಮುಖ್ಯ ಭಾಷಣಕಾರರಾದ ಖ್ಯಾತ ತುಳು ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಮಾತನಾಡಿ, “ತುಳುನಾಡಿನ ಆದಿ ಆರಾಧನೆಗಳಾದ ಬೆಮ್ಮರ್ ಮತ್ತು ಲೆಕ್ಕೆಸಿರಿ ಕೇವಲ ನಂಬಿಕೆಗಳಲ್ಲ, ಅವು ಈ ಮಣ್ಣಿನ ಸಾಂಸ್ಕೃತಿಕ ಇತಿಹಾಸದ ದಾಖಲೆಗಳು” ಎಂದು ಪ್ರತಿಪಾದಿಸಿದರು.

​ಗೋಷ್ಠಿಗಳ ವಿವರ:

ಎರಡು ದಿನಗಳ ಅವಧಿಯಲ್ಲಿ ಒಟ್ಟು ಮೂರು ಗೋಷ್ಠಿಗಳು ನಡೆದವು. ಮೊದಲ ಗೋಷ್ಠಿಯಲ್ಲಿ ಡಾ. ವೈ. ಎನ್. ಶೆಟ್ಟಿ ಹಾಗೂ ಡಾ. ಬಿ. ಜನಾರ್ದನ ಭಟ್ ವಿಷಯ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಡಾ. ಲಕ್ಷ್ಮಿ ಜಿ. ಪ್ರಸಾದ್ ಹಾಗೂ ಡಾ. ಮಂಜುಳಾ ಪಿ. ಅವರು ಸಂಶೋಧನಾತ್ಮಕ ಮಾಹಿತಿಯನ್ನು ಹಂಚಿಕೊಂಡರು. ಎರಡನೇ ದಿನದ ಗೋಷ್ಠಿಯಲ್ಲಿ ಡಾ. ಕಿಶೋರ್ ಕುಮಾರ್ ರೈ ಶೇಣಿ, ಜಯಲಕ್ಷ್ಮಿ ಶೆಟ್ಟಿ ಹಾಗೂ ಅರವಿಂದ ಬೆಳ್ಚಡ ಅವರು ಭಾಗವಹಿಸಿ ತುಳು ಸಂಸ್ಕೃತಿಯ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದರು.

​ಸಮಾರೋಪ ಸಮಾರಂಭ:

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಅವರು ವಹಿಸಿದ್ದರು. ಸಮಾರೋಪ ಭಾಷಣ ಮಾಡಿದ ಖ್ಯಾತ ಸಾಹಿತಿ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು, ತುಳುನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಇಂತಹ ಗೋಷ್ಠಿಗಳು ಪೂರಕವಾಗಿವೆ ಎಂದರು.

​ವೇದಿಕೆಯಲ್ಲಿ ತುಳುವರ್ಲ್ಡ್ ಫೌಂಡೇಶನ್‌ನ ಡಾ. ರಾಜೇಶ್ ಆಳ್ವ, ಪ್ರೊ. , ಡಾ. ಎ. ಎಂ. ಶ್ರೀಧರನ್, ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಡಾ. ಶ್ರುತಿ ಚಂದ್ರಶೇಖರ್, ಡಾ. ಅಣ್ಣಯ್ಯ ಕುಲಾಲ್, ದೇವಾನಂದ ಶೆಟ್ಟಿ ಬಸ್ರೂರು, ಮೋರ್ಲಾ ರತ್ನಾಕರ್ ಶೆಟ್ಟಿ ಮುಂಬೈ, ಜಯಪ್ರಕಾಶ್ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು. ‘ನಮ್ಮ ಟಿವಿ’ ಖ್ಯಾತಿಯ ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ನಾಟ್ಯ ಕಲಾವಿದೆ ಅಭಿರಾಮಿ ಆರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಶೆಟ್ಟಿ, ಆಶಾ ಹೆಗ್ಡೆ ಬ್ರಹ್ಮಾವರ, ಹರಿಪ್ರಸಾದ್ ರೈ, ವಿಶ್ವನಾಥ ಆಚಾರ್ಯ, ಮಂದಾರ ರಾಜೇಶ್ ಭಟ್, ಪ್ರಮೋದ್ ಸಪ್ರೆ, ಪದ್ಮಶ್ರೀ ಭಟ್, ಸಹಿತ ಹಲವು ಗಣ್ಯರು, ತುಳು ಘಟಕಗಳ ಪದಾಧಿಕಾರಿಗಳು, ತುಳು ಮನಸ್ಸಿನ ಸಮಾಜದ ಗಣ್ಯರು, ವಿದ್ಯಾರ್ಥಿಗಳು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ತುಳು ವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಶ್ ಆಳ್ವ ಇವರ ಸಂಯೋಜನೆಯಲ್ಲಿ, ಪ್ರಮೋದ್ ಸಪ್ರೆ ಮತ್ತು ಹರಿಪ್ರಸಾದ್ ರೈ ಹಾಗು ಇನ್ನಿತರರ ಸಹಕಾರದೊಂದಿಗೆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಮೂಡಿ ಬಂತು.

ಅಲಯನ್ಸ್ ಯುನಿವರ್ಸಿಟಿ ಬೆಂಗಳೂರು ಇವರು ನೀಡಿದ ವಸತಿ ಉಪಹಾರ ಅತಿಥ್ಯ ಎಲ್ಲವೂ ಉತ್ತಮವಾಗಿತ್ತು, ಬಂದ ಅತಿಥಿಗಳೆಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮದ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ನೇರ ಪ್ರಸಾರ ತುಳುನಾಡುವಾರ್ತೆ ತಂಡ ಯಶಸ್ವಿಯಾಗಿ ಪೂರೈಸಿತು.

LEAVE A REPLY

Please enter your comment!
Please enter your name here