ಮಿಲಾಗ್ರಿಸ್ ಕಾಲೇಜಿನಲ್ಲಿ ‘ಎಐ’ (AI) ಪರಿಕರಗಳ ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

0
48

ಮಂಗಳೂರು,ಜನವರಿ 20 : ಮಿಲಾಗ್ರಿಸ್ ಕಾಲೇಜು ಹಂಪನಕಟ್ಟ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಮತ್ತು ಅಲೋಶಿಯ ಸ್ಪರಿಗಣಿತ ವಿಶ್ವವಿದ್ಯಾಲಯ ಇದರ ಸಹಯೋಗದೊಂದಿಗೆ, “ಬೋಧನೆ ಮತ್ತು ಮಾಧ್ಯಮ ತಂತ್ರಜ್ಞಾನದ ಅಳವಡಿಕೆ ಎಐ ಪರಿಕರಗಳೊಂದಿಗೆ ಶಿಕ್ಷಕರ ಸಬಲೀಕರಣ” ಎಂಬ ವಿಷಯದ ಕುರಿತು ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು  ಮಂಗಳವಾರ ಕಾಲೇಜಿನ ಕಂಪ್ಯೂಟರ್ ಲ್ಯಾಬ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಮೊದಲಗೋಷ್ಠಿಯಲ್ಲಿಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ಲೀಫ್ ಅಕಾಡೆಮಿಯ ಸ್ಥಾಪಕರಾದಯೂಸಫುಲ್ ಅರ್ಷದ್,ಮಾತನಾಡಿ, ಬೋಧನಾ-ಕಲಿಕಾ ಪ್ರಕ್ರಿಯೆ ಮತ್ತು  ದಿನನಿತ್ಯದ ಶೈಕ್ಷಣಿಕ ಬದುಕಿನಲ್ಲಿ ಕೃತಕ ಬುದ್ಧಿಮತ್ತೆ (AI) ಪರಿಕರಗಳ ಪರಿಣಾಮಕಾರಿ ಬಳಕೆಯನ್ನು ಪರಿಚಯಿಸಿದರು. ಅಧ್ಯಾಪಕರಿಗೆಅಭ್ಯಾಸದಅವಧಿಯನ್ನುನಡೆಸಲಾಯಿತು.

ಎರಡನೇ ಅವಧಿಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದವಿಲ್ಸನ್ ಪಿರೇರಾ ಮಾತನಾಡಿ, ಕೃತಕಬುದ್ಧಿಮತ್ತೆಯಸಾಧಕಬಾಧಕಗಳಬಗ್ಗೆತಿಳಿಹೇಳಿದರು.

ಮೂರನೇಗೋಷ್ಠಿಯನ್ನುನಡೆಸಿಕೊಟ್ಟಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದವಿಶಾಲ್ ನಾಯಕ್ ಅವರು ಮಾತನಾಡಿ, ಕಾಲೇಜುಗಳ ಮಾಧ್ಯಮ ಶಿಕ್ಷಣದಲ್ಲಿ ಎಐ ಪರಿಕರಗಳನ್ನು ಸಂಯೋಜಿಸುವ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಿದರು.

​ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರು ಮತ್ತು ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಆಲ್ವಿನ್ ಸೆರಾವೊ ಅವರುಅತಿಥಿಗಳನ್ನು ಸ್ವಾಗತಿಸುತ್ತಾ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಪ್ರಸ್ತುತತೆಯನ್ನು ಒತ್ತಿಹೇಳಿದರು. ಶಿಕ್ಷಕರು ತಮ್ಮ ಬೋಧನಾ ಪದ್ಧತಿಯಲ್ಲಿ ನವೀನ ಡಿಜಿಟಲ್ ಪರಿಕರಗಳನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಅಂಜು ಎಲ್ಸಾ ಥಾಮಸ್, ಉಪಪ್ರಾಂಶುಪಾಲೆ  ಗ್ಲಾನ್ಸಿಯಾ ಫರ್ನಾಂಡಿಸ್, ಸಂಪನ್ಮೂಲ ವ್ಯಕ್ತಿಗಳು,  ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ​ ಪ್ರತಿಭಾ ಅವರು  ನಿರೂಪಿಸಿದರು.  ಐಕ್ಯೂಎಸಿ ಸಂಯೋಜಕರಾದ ಚೇತನ ಅವರು ವಂದಿಸಿದರು.

LEAVE A REPLY

Please enter your comment!
Please enter your name here