ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ಕಾರ್ಕಳ

0
48

ವೈದ್ಯಕೀಯ ಶಿಬಿರ

ಜೀವನಶೈಲಿಯ ರೋಗಗಳ ತಪಾಸಣಾ ಶಿಬಿರವು ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ನೇತೃತ್ವದಲ್ಲಿ ನೆರವೇರಿತು.

ಶಿಬಿರದ ಉದ್ಘಾಟನೆಯನ್ನು ಹಿರಿಯ ತಜ್ಞ ವೈದ್ಯರಾದ ಡಾ.ಕೆ ಆರ್ ಜೋಶಿ ಅವರು ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಜೀವನ ಶೈಲಿಯ ರೋಗಗಳಾದ ಬಿಪಿ , ಸಕ್ಕರೆ ಕಾಯಿಲೆ ,ಕೊಲೆಸ್ಟ್ರಾಲ್ ಕಾಯಿಲೆ ಹಾಗೂ ಹೃದ್ಯೋಗ ಕಾಯಿಲೆಗಳನ್ನು ಆರಂಭಿಕ ಹಂತಗಳಲ್ಲಿ ಗುರುತಿಸುವ ಉದ್ದೇಶದಿಂದ ಕಳೆದ 10 ವರ್ಷಗಳಿಂದ ಇಂತಹ ಶಿಬಿರಗಳನ್ನು ಮೆಡಿಕಲ್ ಮಿಷನ್ ನಡೆಸುತ್ತಾ ಬಂದಿದೆ. ಇವತ್ತಿನ ಸ್ಪರ್ಧಾತ್ಮಕ ಜೀವನದಲ್ಲಿ ರೋಗಗಳ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳುವುದು ಅತಿ ಅವಶ್ಯಕ ಎಂದು ತಿಳಿಸಿದರು.

ಮೆಡಿಕಲ್ ಮಿಷನ್ ಅಧ್ಯಕ್ಷರಾದ ಗಣೇಶ್ ಕಾಂವತ್ ಅವರು ಶಿಬಿರದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದರು.

ಕೋಶ ಅಧಿಕಾರಿ ರವೀಂದ್ರನಾಥ್ ಪೈ ಅವರು ಮೆಡಿಕಲ್ ಮಿಷನ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ವಿವರಣೆ ನೀಡಿದರು.

ಡಾಕ್ಟರ್ ಕೆ. ಆರ್ ಜೋಶಿ ಹಾಗೂ ಡಾಕ್ಟರ್ ಪ್ರಸಾದ್ ಕಿಣೆ ಅವರು 110 ಶಿಬಿರಾರ್ಥಿಗಳಿಗೆ ಪರೀಕ್ಷಿಸಿ ಸೂಕ್ತ ಸಲಹೆ ನೀಡಿದರು.

ಸಕ್ರಿಯ ಪದಾಧಿಕಾರಿಗಳಾದ ಶ್ರೀ ಸತ್ಯನಾರಾಯಣ ಪ್ರಭು , ಲಕ್ಷ್ಮಿ ಆರ್ ಪೈ , ಮೋಹನ್‌ ದಾಸ್ ಕಾವಂತ್ , ಅರುಣ್ ಪೈ , ಗಣೇಶ್ ಪ್ರಭು ಹಾಗೂ ವಿವಿಧ ಸಂಸ್ಥೆಗಳ ಸಿಬ್ಬಂದಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here