ಮಹಾಭಾರತದ ಗಮಕ ವಾಚನ ನಿರಂತರವಾಗಿ ಮುಂದುವರಿಯಲಿ ಅದೇ ದೇವರ ಪೂಜೆ-ರಾಮಚಂದ್ರ ಭಟ್

0
23

ದಾವಣಗೆರೆ : ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ನಿರಂತರವಾಗಿ ಮೂರು ವರ್ಷಗಳಿಂದ ಪ್ರತೀ ಶನಿವಾರ ಜಯಲಕ್ಷ್ಮಿ ಕಾರಂತ್, ದಿವ್ಯ ಚಂದನ್ ಕಾರಂತ್‌ರವರು ಮಹಾಭಾರತದ ಗಮಕ ವಾಚನ ನಡೆಸುತ್ತಿರುವುದು ಶ್ಲಾಘನೀಯ ಈ ಗಮಕ ವಾಚನ ನಿರಂತರವಾಗಿ ಮುಂದುವರಿಯಲಿ ಇದೇ ದೇವರ ಪೂಜೆ, ಧ್ಯಾನ, ಸಂಸ್ಕಾರ, ಸಂಸ್ಕೃತಿ ಇದರಿಂದಾಗಿ ಮಾನಸಿಕವಾಗಿ ಮಾನವನ ಜ್ಞಾನಶಕ್ತಿ ಪ್ರಜ್ವಲಿಸುತ್ತದೆ ಎಂದು ಇತ್ತಿಚಿಗೆ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯಲ್ಲಿ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ಮಹಾಭಾರತದ ಗಮಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಧರ್ಮತ್ತಡ್ಕ ಹೆಚ್.ಎಸ್.ಎಸ್. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ಭಟ್ ತಮ್ಮ ಅಂತರಾಳ ಅನಿಸಿಕೆಗಳನ್ನು ಹಂಚಿಕೊಂಡರು.

ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದೊಂದಿಗೆ ರಾಮಾಯಣ, ಮಹಾಭಾರತದ ಅರಿವು ಮೂಡಿದರೆ ಮಕ್ಕಳ ಪರಿಜ್ಞಾನ ಹೆಚ್ಚುತ್ತದೆ. ಶಿಕ್ಷಣಕ್ಕೆ ಇದೇ ನೆಲಗಟ್ಟು ಅವರ ಮುಂದಿನ ಸಾಧನೆಗೆ ಇದೇ ದಾರಿದೀಪ ಈ ಆಧ್ಯಾತ್ಮಿಕ ಪರಂಪರೆಯ ಸಮಾರಂಭಕ್ಕೆ ಮುರಳಿ ಯಾದವ್, ಶಶಿರಾಜ ನೀಲಂಗಳ ಗುರುಮೂರ್ತಿ, ಕುಮಾರಿ ಅನೂಷಾ, ರಾಧಾಮಣಿ ಗಣೇಶ್, ಮೀಯಪದವು, ಚಂದನ್ ಕಾರಂತ್ ಮುಂತಾದವರು ಸಹಕರಿಸಿದರು ಎಂದರು.

ಶ್ರೀರಾಮ ಕಾರಂತರು ಮಹಾಭಾರತ ಕಥಾಮಂಜರಿ ಗ್ರಂಥಕ್ಕೆ ಆರತಿ ಬೆಳಗಿ ಆಧ್ಮಾತ್ಮಿಕ ಪರಂಪರೆಯನ್ನು ಅನುಸರಿಸಿದರು. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ನೂತನ ಅಧ್ಯಕ್ಷರಾದ ರಾಧಾಮಣಿ, ಏಕಾಹ ಭಜನಾ ಮಂಡಳಿ ಟ್ರಸ್ಟಿಗಳಾದ ಲಿಂಗಪ್ಪ ಪಟೇಲ್, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಮೂರು ವರ್ಷಗಳಿಂದ ಮಹಾಭಾರತದ ಗಮಕ ವಾಚನ ಸಮಾರಂಭಕ್ಕೆ ಆಗಮಿಸಿ ಕಲಿತ ಮಕ್ಕಳಿಗೆ ಪೋಷಕರಿಗೆ ಗೌರವಿಸಲಾಯಿತು. ನಿರಂತರವಾಗಿ ಈ ಗಮಕದೊಂದಿಗೆ ಅರ್ಥಪೂರ್ಣವಾಗಿ ವಾಚನ ಮಾಡಿದ ಜಯಲಕ್ಷ್ಮಿ ಕಾರಂತ್, ದಿವ್ಯ ಚಂದನ್ ಕಾರಂತ್‌ರವರಿಗೆ ಪ್ರೇಕ್ಷಕರು, ಸಮಿತಿಯವರು ಅಭಿಮಾನದಿಂದ ಅಭಿನಮದನೆ ಸಲ್ಲಿಸಿ ಸನ್ಮಾನಿಸಲಾಯಿತು.

ತಾರಾ ಪ್ರವೀಣ್, ವಿಜಯ ರೈ, ಸುರೇಶ ಶೆಟ್ಟಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಚೇತನಾ ಹೆಬ್ಬಾರ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಜಯಲಕ್ಷ್ಮೀ ರಾಮಚಂದ್ರ ಹೊಳ್ಳ ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ರಾಧಾಮಣಿ ಯವರು ವಂದನಾರ್ಪಣೆ ಮಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here