ಫೆ.8 : ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 75ನೇ ವಾರ್ಷಿಕೋತ್ಸವ

0
31

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 75 ನೇ ವಾರ್ಷಿಕೋತ್ಸವ, ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ,ಅಮೃತ ಮಹೋತ್ಸವ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 8 ರಂದು ಸಂಜೆ 6 ಗಂಟೆಗೆ ಕಲಾಕ್ಷೇತ್ರದ ಬಳಿಯ ತಲ್ಲೂರು ಗಾರ್ಡನ್ ನಲ್ಲಿ ನಡೆಯಲಿದೆ.

ಸಂಘದ ಬಾಲಕಲಾವಿದರಿಂದ ಮಾಯಾಪುರಿ ಮಹಾತ್ಮೆ ಎಂಬ  ಯಕ್ಷಗಾನ ಬಯಲಾಟ ಜರಗಲಿದೆ. ಬಳಿಕ ಇಂದ್ರಾಳಿ ಜಯಕರ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ, ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಅದಿತಿ ಬಿಲ್ಡರ್ ಮಾಲಕ ರಂಜನ್ ಕೆ, ಸಂಘದ ಅಧ್ಯಕ್ಷ ಕೇಶವಮೂರ್ತಿಬೆಲ್ಪತ್ರೆ ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ,ಪ್ರೊ ಉದಯಕುಮಾರ್ ಶೆಟ್ಟಿ ಮಣಿಪಾಲ  ಇವರು ಭಾಗವಹಿಸುವರು, ಯಕ್ಷಗಾನ ಕಲಾವಿದ,ಪ್ರಸಿದ್ಧ ಸ್ತ್ರೀ ವೇಷಧಾರಿ  ದಯಾನಂದ ಬಳೆಗಾರ ನಾಗೂರು ಇವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾಕಾರ್ಯಕ್ರಮದ ಬಳಿಕ ಸಂಘದ ವಿದ್ಯಾರ್ಥಿ ಗಳಿಂದ ಯಕ್ಷಗಾನ ಬಯಲಾಟ ವೀರಮಣಿ ಕಾಳಗ ನಡೆಯಲಿದೆ ಎಂದು ಕಲಾಕ್ಷೇತ್ರ ದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here