ಕೊಲೆ ಯತ್ನದ ಭೀಕರತೆ : 68 ಇರಿತಗಳ ನಡುವೆ ಬದುಕುಳಿದ ವ್ಯಕ್ತಿ

0
14

ಬೆಂಗಳೂರು : ವ್ಯಕ್ತಿಯೋರ್ವನ ಮೇಲೆ ಹಾಡು ಹಗಲೇ ನಡು ರಸ್ತೆಯಲ್ಲಿ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಭೀಕರ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ಸಂಭವಿಸಿದೆ.

ಸಂತೋಷ್ ಎಂಬ ಕೊಲೆ ಆರೋಪಿಯ ಮೇಲೆ ಶರತ್ ಮತ್ತು ಆತನ ಗ್ಯಾಂಗ್ ಮಾರಕಾಸ್ತ್ರಗಳಿಂದ ಸುಮಾರು 68 ಬಾರಿ ಮನಸೋಇಚ್ಛೆ ಕೊಚ್ಚಿ ಹಲ್ಲೆ ನಡೆಸಿದ್ದು, ಬರೋಬ್ಬರಿ 68 ಬಾರಿ ಮಚ್ಚಿನಿಂದ ಏಟು ತಿಂದಿದ್ದರೂ ಸಂತೋಷ್‌ ಬದುಕುಳಿದಿರುವುದು ಪವಾಡವೇ ಸರಿ ಎಂದು ಹೇಳಲಾಗುತ್ತಿದೆ. ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಲ್ಲೇ ಡ್ಯಾನ್ಸ್ ಮಾಡುವ ಮೂಲಕ ತಮ್ಮ ವಿಕೃತಿಯನ್ನು ಪ್ರದರ್ಶಿಸಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಶರತ್ ಅಂಡ್ ಗ್ಯಾಂಗ್ ಕುಡಿದು ಸಂತೋಷ್ ಮೇಲೆ ದಾಳಿ ನಡೆಸಿದ್ದಾರೆ. ಪ್ರಸ್ತುತ ಮಾಗಡಿ ರಸ್ತೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here