ಮುಚ್ಚೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಚ್ಚೂರು ಇಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತರಬೇತಿ ಹಾಗೂ Seishin Ryu Karate and Kobudo Federation ವತಿಯಿಂದ ಕರಾಟೆ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಆಗಿರುವ ಜನಾರ್ದನ ಗೌಡ ಇವರು ವಹಿಸಿದ್ದರು. ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ವಿಕಸಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಅಧ್ಯಕ್ಷರು ದಿವಾಕರ್ ಶೆಟ್ಟಿ ಖಂಡಿಗ, ಸಂಚಾಲಕರು ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷರು ದುರ್ಗದಾಸ್ ಶೆಟ್ಟಿ, ಕಟೀಲು ಮೇಳದ ಕಲಾವಿದ ಹಾಗೂ ಯಕ್ಷಗುರುಗಳು ಸಂದೇಶ್ ಭಟ್ ಮರಕಡ, ಯಕ್ಷಗಾನ ಕಲಾವಿದರು ಮೋಹನ್ ದೇವಾಡಿಗ ಹಾಗೂ Seishin Ryu Karate and Kobudo Federation ವತಿಯಿಂದ ರಾಜೇಶ್ ಅಂಚನ್ ಪುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಫ್ರಾನ್ಸಿಸ್ ಲೋಬೋ, ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಬಾಲಕೃಷ್ಣ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಪ್ರಶಾಂತ್, ಎಸ್‌ಡಿಎಂಸಿ ಸದಸ್ಯರು ಅಶೋಕ್ ನಾಯ್ಕ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕರು ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಂಧ್ಯಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಸನ್ನುತ್ತಾ ವಂದನಾರ್ಪಣೆ ಸಲ್ಲಿಸಿದರು.

