ಭಾರತದತ್ತ ಸಾಗುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ

0
153

ಟೆಹ್ರಾರ್ : ಯುಎಇ ಬಂದರಿನಿಂದ ಹೊರಟಿದ್ದ ಥಾಯ್ ಧ್ವಜದ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾಳಿ ನಡೆಸಲಾಗಿದೆ.

ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಥಾಯ್ ಕಂಪೆನಿ ಪ್ರೆಷಿಯಸ್ ಶಿಲ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನಾರಿ ಹೆಸರಿನ ನೌಕೆ ಮೇಲೆ ದಾಳಿ ನಡೆಸಲಾಗಿದೆ.

ಈ ನೌಕೆ ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿನತ್ತ ಸಾಗುತ್ತಿತ್ತು. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಸಂದರ್ಭದ ವೇಳೆ ಈ ದಾಳಿ ಸಂಭವಿಸಿದೆ.ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.

20 ನಾವಿಕರನ್ನು ತೆಪ್ಪಗಳ ಮೂಲಕ ಒಮಾನಿ ನೌಕಾಪಡೆ ರಕ್ಷಿಸಿದ್ದು ಉಳಿದ ಮೂವರು ನೌಕೆಯಲ್ಲಿಯೇ ಇದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. 178 ಮೀಟರ್ ಉದ್ದವಿರುವ ಈ ಹಡಗು 30,000 ಟನ್‌ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸದ್ಯ ದಾಳಿಯ ಬಗ್ಗೆ ತನಿಖೆ ನಡೆಸುವುದಾಗಿ ರಾಯಲ್ ಥಾಯ್ ನೌಕಾಪಡೆ ಹೇಳಿಕೆ ನೀಡಿದೆ.

LEAVE A REPLY

Please enter your comment!
Please enter your name here