ಸಿಇಟಿ ಪರೀಕ್ಷೆವೇಳೆ ಜನಿವಾರ ತೆಗೆದು ಪರೀಕ್ಷೆಗೆ ಹಾಜಾರಾಗುವಂತೆ ಹೇಳಿದ್ದು ಖಂಡನೀಯ : ಐವನ್‌ ಡಿʼಸೋಜಾ

0
4

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದು ಪರೀಕ್ಷೆಗೆ ಹಾಜಾರಾಗುವಂತೆ ಆದೇಶಿಸಿ ಜನಿವಾರ ತೆಗೆಸಿದ್ದು, ಖಂಡನೀಯ ಇಂತಹ ಕ್ರಮ ತೆಗೆದುಕೊಂಡ ಅಧಿಕಾರಿಗಳ ಮೇಲೆ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ಕಠಿಣ ಕ್ರಮ  ಅವಶ್ಯಕ.  ಇಂತಹ ಕೆಲವು ಘಟನೆಗಳು ಸಂವಿಧಾನ ವಿರೋಧಿ ಇಂತಹ ಲೋಪದೋಷಗಳಿಂದ ಸಮಾಜದ ಮೇಲೆ ವೈರತ್ವವನ್ನು ಉಂಟುಮಾಡಿವುದು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಕ್ರಮವನ್ನು ಪ್ರತಿಯೊಬ್ಬರೂ ಖಂಡಿಸಬೇಕು.

ಇಂತಹ ಕ್ರಮ ಕೈಗೊಂಡವರ ವಿರುದ್ದ ಅವರ ಪೂರ್ವಗ್ರಹ ತನಿಖೆಯಾಗಬೇಕು ಇಂತಹ ಕ್ರಮಗಳಿಗೆ  ಕಾರಣ ಅಗುವ ಅಂಶ ತನಿಖೆ ನಡೆಸಿ ಇದರ ಹಿಂದೆ ಇರುವ ಮೂಲಭೂತವಾದಿಗಳ ವಿಚಾರವನ್ನು ಬಯಲಿಗೆಳೆದು ಕ್ರಮಕೈಗೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಸುಧಾಕರ್‌ ರವರನ್ನು ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರು ಪತ್ರದ ಮುಖೇನ ವಿನಂತಿಸಿದ್ದಾರೆ. ಮತ್ತು ಇಂತಹ ವಿಚಾರಗಳಲ್ಲಿ ಮುಂದೆ ರಾಜಿ ಮಾಡಿಕೊಳ್ಳದೇ , ಇಂತಹ ಘಟನೆಗಳು ನಡೆಯದಂತೆ ಮತ್ತು ಇಂತಹ ಘಟನೆಗಳು ನಡೆದಲ್ಲಿ ಇದರ ಹೊಣೆಗಾರಿಕೆಯನ್ನು ಮಾಡಿದವರಿಗೆ ಸರಿಯಾದ ನಿರ್ದೇಶನ ನೀಡಿ ಇಲಾಖೆಯ ನಿಯಮಾವಳಿಯನ್ನು ನಿರ್ದೇಶಿಸಬೇಕು ಎಂದು ಐವನ್‌ ಡಿʼಸೋಜಾರವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here