ಉಡುಪಿ: ಶ್ರೀದೇವಿ ಭೂದೇವಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ವಾರ್ಷಿಕ ವರ್ಧಂತಿ ಹಾಗೂ ರಂಗ ಪೂಜಾ ಮಹೋತ್ಸವವು ಎ.19, 2025 ಶನಿವಾರದಿಂದ ಎ. 25, 2025 ಶುಕ್ರವಾರದವರೆಗೆ ಜರುಗಲಿದೆ.
ವೇದಮೂರ್ತಿ ಶ್ರೀ ಶ್ರೀಶ ತಂತ್ರಿ ಹಾಗೂ ವೇದಮೂರ್ತಿ ಶ್ರೀ ಮುರಳೀಧರ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕವು ನಡೆಯಲಿದೆ.
ದಿನಾಂಕ 19-04-2025 ರಂದು ಬೆಳಿಗ್ಗೆ 8 ಗಂಟೆಯಿಂದ ಹೊರೆಕಾಣಿಕೆ ಶೇಖರಣೆ, ಸಂಜೆ 4 ಗಂಟೆಗೆ ಹೊರೆ ಕಾಣಿಕೆಗೆ ಚಾಲನೆ ನಡೆಯಲಿದೆ. ಸಂಜೆ 7 ರಿಂದ ಪೂಜಾ ವಿಧಿ ವಿಧಾನಗಳು ಜರುಗಲಿದೆ.
ದಿನಾಂಕ 20-04-2025 ರಂದು ಬೆಳಿಗ್ಗೆ 8 ಗಂಟೆಯಿಂದ 108 ಕಾಯಿ ಗಣಯಾಗ, ಬೆಳಿಗ್ಗೆ 11.30ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.
ದಿನಾಂಕ: 21-04-2025 ರಂದು ಬೆಳಿಗ್ಗೆ 11.30ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಮತ್ತು 7.30 ಕ್ಕೆ ಕಲ್ಲಡ್ಕ ಶ್ರೀ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ದಿನಾಂಕ22-04-2024 ಬೆಳಿಗ್ಗೆ 8 ಗಂಟೆಗೆ ಚಂಡಿಕಾಯಾಗ, ಆಶ್ಲೇಷಾ ಬಲಿ, ಬೆಳಿಗ್ಗೆ 11.30ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಶ್ರೀ ಸುಂದರ ಮತ್ತು ಬಳಗ ಇವರಿಂದ ವೇಣುವಾದನ ಕಛೇರಿ ಹಾಗೂ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಕೆಳಾರ್ಕಳಬೆಟ್ಟು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ದಿನಾಂಕ 23-04-2025 ರಂದು ಬೆಳಿಗ್ಗೆ 7.29 ಗಂಟೆಗೆ ಬ್ರಹ್ಮಕುಂಭಾಭಿಷೇಕ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 9 ರಿಂದ ಅಭಿನಯ ಕಲಾವಿದರು ಉಡುಪಿ ಇವರ ತುಳು ಹಾಸ್ಯಮಯ ನಾಟಕ ಶಾಂಭವಿ ಪ್ರದರ್ಶನಗೊಳ್ಳಲಿದೆ.
ದಿನಾಂಕ 25-04-2025 ರಂದು ರಾತ್ರಿ 8 ಗಂಟೆಯಿಂದ ಶ್ರೀ ಬೊಬ್ಬರ್ಯ ಹಾಗೂ ಕಲ್ಕುಡ ಪರಿವಾರ ದೈವಗಳ ಕೋಲ ನಡೆಯಲಿದೆ.
ಎ.19-25: ಶ್ರೀದೇವಿ ಭೂದೇವಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು ಅಷ್ಟಬಂಧ ಬ್ರಹ್ಮಕುಂಭಾಭಿಷೇಕ
RELATED ARTICLES