Saturday, June 14, 2025
Homeದಾವಣಗೆರೆಕಲಾಕುಂಚದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಕಲಾಕುಂಚದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ 2024-25ನೇ ಸಾಲಿನ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ, ಕನ್ನಡದಲ್ಲಿ 125 ಕ್ಕೆ 120, 121, 122, 123, 124 ಅಂಕ ಪಡೆದ ಮಕ್ಕಳಿಗೆ “ಕನ್ನಡ ಕುವರ-ಕುವರಿ” ಜಿಲ್ಲಾ ಪ್ರಶಸ್ತಿ, ಒಟ್ಟು ಅಂಕ 625 ಕ್ಕೆ 600 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ಸಿ.ಬಿ.ಎಸ್.ಸಿ. (ಸೆಂಟ್ರಲ್ ಸಿಲಿಬಸ್)ನಲ್ಲಿ ಒಟ್ಟು ಅಂಕ 500 ಕ್ಕೆ 480 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
2025ನೆ ಜುಲೈ 19 ಶನಿವಾರ, 20 ಭಾನುವಾರ ದಾವಣಗೆರೆಯಲ್ಲಿ ನಡೆಯುವ ಈ ವಿಜೃಂಭಣೆಯ ಅಪರೂಪದ ಸಮಾರಂಭದಲ್ಲಿ ಮಕ್ಕಳನ್ನು ಮಂಗಳವಾದ್ಯದೊAದಿಗೆ ಮೆರವಣಿಗೆ ಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿ ಪ್ರತ್ಯೇಕ ಸಿಂಹಾಸನದಲ್ಲಿ ಕೂರಿಸಿ, ಮಕ್ಕಳ ತಂದೆ-ತಾಯಿ ಯೊಂದಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ವೇದಿಕೆಯ ಮದುವೆ ಮಂಟಪದಲ್ಲಿ ಮಕ್ಕಳ ತಲೆ ಮೇಲೆ ಕಿರೀಟವಿಟ್ಟು ಅವರದೇ ಭಾವಚಿತ್ರ ವಿರುವ ಅವರ ತಂದೆ-ತಾಯಿ ಹೆಸರಿನೊಂದಿಗೆ ಸನ್ಮಾನಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ, ಚಿನ್ನದ ಲೇಪನದ ಪದಕ ಕೊರಳಿಗೆ ಹಾಕಿ ಪುಷ್ಪವೃಷ್ಠಿಯೊಂದಿಗೆ ನಾಡಿನ ಗಣ್ಯಮಾನ್ಯರ ಅಮೃತ ಹಸ್ತದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
20-06-2025
ಹೆಚ್ಚಿನ ಮಾಹಿತಿಗೆ 9538732777, 9743897578, 9945785170, 9448423683 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular