ಕೊಡವೂರು : ಕೃಷಿ ಇಲಾಖೆ ಆದಿ ಉಡುಪಿ ಹಾಗೂ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ E-KYC ಮತ್ತು FRUITS ನೋಂದಾವಣೆ ವಿಶೇಷ ಶಿಬಿರವನ್ನು ಉದ್ಘಾಟಿಸಿ ನಿಕಟಪೂರ್ವ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಅವರು ಮಾತನಾಡಿದರು.

ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳು ಹಾಗೂ ಮಾಹಿತಿಗಳು ಪ್ರತಿಯೊಂದು ಮನೆ ಮತ್ತು ಮನಸ್ಸಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ. ಈ ಶಿಬಿರಗಳ ಮುಖಾಂತರ ರೈತರಿಗೆ ಕೃಷಿ ಇಲಾಖೆಯ ಸೌಲಭ್ಯಗಳ ಸರಿಯಾದ ಮಾಹಿತಿ ದೊರೆತು, ಕೃಷಿಯಲ್ಲಿ ತೊಡಗಿಸಿಕೊಂಡಿರುವವರಿಗೆ ನೆರವಾಗುವುದಲ್ಲದೆ, ಇನ್ನು ಹೆಚ್ಚಿನ ಜನರು ಉತ್ತೇಜನಗೊಂಡು ಕೃಷಿ ರಂಗಕ್ಕೆ ಬರಲು ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೊಡವೂರು ವಾರ್ಡು ಕೃಷಿ ಪ್ರಮುಖರಾದ ಅರುಣ್ ರಾವ್ ಉದ್ದಿನಹಿತ್ತಲು, ಹಾಲು ಉತ್ಪಾದಕರ ಸಂಘ ನಿಯಮಿತ ಕೊಡವೂರು ಇದರ ಅಧ್ಯಕ್ಷರಾದ ಶ್ರೀ ರಾಮ ಶೇರಿಗಾರ್, ಕೃಷಿ ಇಲಾಖೆಯ ತಾಲೂಕು ವ್ಯವಸ್ಥಾಪನ ನಿರ್ದೇಶಕರಾದ ಸಂಜನಾ ಶೆಟ್ಟಿ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಊರಿನ ಹಿರಿಯರಾದ ಸತೀಶ್ ಕೆದ್ಲಾಯ, ಸದಾನಂದ ಬಂಗೇರ ಹಾಗೂ ರಾಜೇಂದ್ರ ಬಾಚನಬೈಲು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಮಿತ್ ಗರ್ಡೇ ಸ್ವಾಗತಿಸಿದರೆ, ಅರುಣ್ ರಾವ್ ಧನ್ಯವಾದ ನೆರವೇರಿಸಿದರು.

