ದಾವಣಗೆರೆ : ದಾವಣಗೆರೆಯ ಭರತಾಂಜಲಿ ಆಕಾಡಮಿಯಿಂದ ಶರನ್ನವರಾತ್ರಿ ಮಹೋತ್ಸವದ ಪರವಾಗಿ ಮೈಸೂರಿನ ರಮಾಗೋವಿಂದ ರಂಗ ಮಂದಿರದಲ್ಲಿ ಭರತನಾಟ್ಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಯಶಸ್ವಿಯಾಗಿ ನೆರೆದ ಸಾವಿರಾರು ಪ್ರೇಕ್ಷಕರು ಮೆಚ್ಚುಗೆ ಪಡೆದರು ಎಂದು ಭರತನಾಟ್ಯ ಶಿಕ್ಷಕಿ, ನಿರ್ದೇಶಕರಾದ ವಿದುಷಿ ಡಾ. ಬಿ.ಮಂಗಳಾ ಶೇಖರ್ ತಿಳಿಸಿದ್ದಾರೆ.
ಈ ಸಾಂಸ್ಕೃತಿಕ ಭರತನಾಟ್ಯದಲ್ಲಿ ವಿದ್ವಾನ್ ಗೋಕುಲ್ ನಾಯಕ್ ಪಿ.ಎಂ., ವಿದುಷಿ ಡಾ|| ಶ್ರೇಯ ಹೆಗಡೆ, ಕುಮಾರಿ ಡಾ|| ಅಭಿಶ್ರೀ, ಕುಮಾರಿ ಗೌರಿ ಎಂ., ಕುಮಾರಿ ಅನುಪಮ ಎ.ಶೆಟ್ಟಿ. ಕುಮಾರಿ ಸಾನ್ವಿ ಎನ್.ಕುಸಗೂರ್, ಕುಮಾರಿ ನಿಹಾರಿಕ, ವಿ.ಕೆ.ನಾಯಕ್, ಕುಮಾರಿ ಚಿನ್ಮಯ್ ಕೆ. ಕುಮಾರಿ ಲಾವಣ್ಯ, ಸೀಮಾ ಪ್ರಿಯಾ ಓ.ಜೆ. ರೋಷನಿ ವಿನೋದ್ಕುಮಾರ್, ಡಾ|| ರಶ್ಮಿ ಎ., ಡಾ|| ಬಿ.ಮಂಗಳಾ ಶೇಖರ್ ಮುಂತಾದವರು ಅಚ್ಚುಕಟ್ಟಾಗಿ ಸಾಂಪ್ರದಾ ಯದಂತೆ ಸಾಮೂಹಿಕ ಭರತನಾಟ್ಯ ಪ್ರದರ್ಶನ ಸುಸಂಪನ್ನಗೊಂಡಿತು. ಭರತಾಂಜಲಿ ಆಕಾಡಮಿಯ ಸಂಸ್ಥಾಪಕ ರಾದ ರಾಜಶೇಖರ್ ಬೆನ್ನೂರು ಪ್ರಕಟಿಸಿದರು.

