ಆಸ್ತಿಗಾಗಿ ಹೆಸರು ಬದಲಾಯಿಸಿ ಮದುವೆಯಾದ ಮುಸ್ಲಿಂ ಮಹಿಳೆ! ಮುಂದೆ ಆಗಿದ್ದೇನು ಗೊತ್ತಾ?!

0
172

ಭೋಪಾಲ್: ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಡ್ವಾರ್ (ಖಿಟೋಲಾ) ಗ್ರಾಮದ ಇಂದ್ರಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?: ಇಂದ್ರಕುಮಾರ್ ತಿವಾರಿ, ಅರೆಕಾಲಿಕ ಶಿಕ್ಷಕ ಮತ್ತು ರೈತನಾಗಿದ್ದರು. ಕಳೆದ ತಿಂಗಳು ಪ್ರಸಿದ್ಧ ಗುರು ಅನಿರುದ್ಧಾಚಾರ್ಯ ಮಹಾರಾಜ್ ಅವರ ಆಧ್ಯಾತ್ಮಿಕ ಪ್ರವಚನದ ಸಂದರ್ಭದಲ್ಲಿ, ‘18 ಎಕರೆ ಭೂಮಿ ಹೊಂದಿದ್ದೇನೆ. ಆದರೆ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ’ ಎಂದು ಹತಾಶೆ ವ್ಯಕ್ತಪಡಿಸಿದ್ದರು.

ಈ ವಿಡಿಯೋ ವೈರಲ್‌ ಆಗಿತ್ತು. ಇದನ್ನೇ ವಂಚಕರು ದಾಳವಾಗಿ ಬಳಸಿಕೊಂಡಿದ್ದರು. ವಂಚಕಿ ಸಾಹಿಬಾ ಬಾನೋ ನಕಲಿ ಆಧಾರ್‌ ಕಾರ್ಡ್‌ ಮಾಡಿಸಿ, ಖುಷಿ ತಿವಾರಿ ಎಂದು ಹೆಸರು ಬದಲಿಸಿಕೊಂಡು, ಸಾಮಾಜಿಕ ಜಾಲತಾಣದ ಮೂಲಕ ಇಂದ್ರಕುಮಾರ್‌ರನ್ನು ಸಂಪರ್ಕಿಸಿದ್ದಳು. ಬಳಿಕ ಅವರನ್ನು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಕರೆಸಿ ಮದುವೆಯಾಗಿದ್ದಳು. ಇದಾದ ಕೆಲವು ದಿನಗಳ ನಂತರ ಇಂದ್ರಕುಮಾರ್‌ ಶವ ಉತ್ತರ ಪ್ರದೇಶದ ಕುಶಿನಗರದ ಹತಾ ಕೊತ್ವಾಲಿ ಪ್ರದೇಶದ ಸುಕರೌಲಿಯಲ್ಲಿ ಪತ್ತೆಯಾಗಿತ್ತು. ಶವದ ಕತ್ತಿನಲ್ಲಿ ಚಾಕು ಸಿಲುಕಿಕೊಂಡಿತ್ತು. ಇದೀಗ ಸಾಹಿಬಾಳೇ ಆತನನ್ನು ಕೊಂದಿದ್ದಾಳೆ ಎಂದು ಗೊತ್ತಾಗಿದೆ ಹಾಗೂ ಆಕೆಯನ್ನು ಬಂಧಿಸಲಾಗಿದೆ. ಆಕೆಯ ಸಹಚರರಿಗಾಗಿ ಬಲೆ ಬೀಸಲಾಗಿದೆ.

LEAVE A REPLY

Please enter your comment!
Please enter your name here