ಜರ್ಮನಿಯ ತುರಿಂಗಿಯಾ ಪ್ರಾಂತ್ಯದ ಮಿನಿಸ್ಟರ್-ಪ್ರೆಸಿಡೆಂಟ್ ಅವರು ಭಾರತ ಮತ್ತು ಜರ್ಮನಿ ನಡುವಿನ ನಾವೀನ್ಯತೆ ಹಾಗೂ ಡಿಜಿಟಲ್ ರೂಪಾಂತರದ ಸಹಯೋಗವನ್ನು ಬಲಪಡಿಸಲು SAP Labs India ಕ್ಕೆ ಭೇಟಿ ನೀಡಿದ್ದಾರೆ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಮಿನಿಸ್ಟರ್-ಪ್ರೆಸಿಡೆಂಟ್ ಅವರು SAP Labs India ದಲ್ಲಿ 1,000-ಮರಗಳನ್ನು ನೆಡುವ ಅಭಿಯಾನವನ್ನು ಉದ್ಘಾಟಿಸಿದರು. ಇದು ಸುಸ್ಥಿರತೆ, ನಾವೀನ್ಯತೆ ಮತ್ತು ಜವಾಬ್ದಾರಿಯುತ ಬೆಳವಣಿಗೆಗೆ ಭಾರತ ಮತ್ತು ಜರ್ಮನಿ ದೇಶಗಳು ಹೊಂದಿರುವ ಜಂಟಿ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು : ತಂತ್ರಜ್ಞಾನ, ನಾವೀನ್ಯತೆ, ಎಂಜಿನಿಯರಿಂಗ್, ಸಂಶೋಧನೆ ಹಾಗೂ ಡಿಜಿಟಲ್ ರೂಪಾಂತರದಾದ್ಯಂತ ಭಾರತ ಮತ್ತು ಜರ್ಮನಿ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಹಯೋಗವನ್ನು ಒತ್ತಿಹೇಳಲು, ಜರ್ಮನಿಯ ತುರಿಂಗಿಯಾ ಪ್ರಾಂತ್ಯದ ಮಿನಿಸ್ಟರ್-ಪ್ರೆಸಿಡೆಂಟ್ ಆದ ಮಾರಿಯೋ ವೋಯಿಗ್ಟ್ ಅವರು ಇಂದು ಬೆಂಗಳೂರಿನಲ್ಲಿರುವ SAP Labs India ಇನ್ನೋವೇಶನ್ ಪಾರ್ಕ್‌ಗೆ ಭೇಟಿ ನೀಡಿದರು. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಮಿನಿಸ್ಟರ್-ಪ್ರೆಸಿಡೆಂಟ್ ಅವರು SAP Labs India ದ ನಾಯಕತ್ವ ಹಾಗೂ ಭೇಟಿ ನೀಡಿದ ನಿಯೋಗದೊಂದಿಗೆ ಸೇರಿ 1,000-ಮರಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ನಾವೀನ್ಯತೆ ಆಧಾರಿತ ಪ್ರಗತಿಯೊಂದಿಗೆ ಸುಸ್ಥಿರತೆ ಮತ್ತು ಜವಾಬ್ದಾರಿಯುತ ಬೆಳವಣಿಗೆಗೆ ಎರಡೂ ದೇಶಗಳು ಹೊಂದಿರುವ ಜಂಟಿ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಈ ಭೇಟಿಯು ಜಾಗತಿಕ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಮತ್ತು AI-ಚಾಲಿತ ಉದ್ಯಮಗಳು ಹಾಗೂ ಡಿಜಿಟಲ್ ಆರ್ಥಿಕತೆಗಳ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನ ಪಾಲುದಾರಿಕೆಗಳ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ವಿಶ್ವಾದ್ಯಂತದ ಸಂಸ್ಥೆಗಳು AI, ಕ್ಲೌಡ್, ಡೇಟಾ ಮತ್ತು ಇಂಟೆಲಿಜೆಂಟ್ ತಂತ್ರಜ್ಞಾನಗಳ ಅಳವಡಿಕೆಯನ್ನು ವೇಗಗೊಳಿಸುತ್ತಿರುವ ಬೆನ್ನಲ್ಲೇ, ಭಾರತ ಮತ್ತು ಜರ್ಮನಿ ದೇಶಗಳು ಪ್ರತಿಭಾ ವಿಕಸನ, ಸಂಶೋಧನೆ, ಸುಧಾರಿತ ಉತ್ಪಾದನೆ, ಸುಸ್ಥಿರತೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್ ಮತ್ತು ನಾವೀನ್ಯತೆ ಆಧಾರಿತ ಬೆಳವಣಿಗೆಯಾದ್ಯಂತ ತಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತಿವೆ.
ಈ ಭೇಟಿಯ ಸಮಯದಲ್ಲಿ, ಜಾಗತಿಕ ಸಂಸ್ಥೆಯು ಮುಂದಿನ ಪೀಳಿಗೆಯ ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್‌ಗಳನ್ನು ಹೇಗೆ ರೂಪಿಸುತ್ತಿದೆ ಎಂಬ ಒಳನೋಟಗಳನ್ನು ಪಡೆಯಲು ನಿಯೋಗವು SAP Labs India ದ ನಾಯಕರು, ಎಂಜಿನಿಯರ್‌ಗಳು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಿತು. ಈ ಚರ್ಚೆಗಳು ಮುಖ್ಯವಾಗಿ ಬಿಸಿನೆಸ್ AI, ಕ್ಲೌಡ್ ರೂಪಾಂತರ, ಡೇಟಾ ಮತ್ತು ಅನಾಲಿಟಿಕ್ಸ್, ಡೆವಲಪರ್ ಉತ್ಪಾದಕತೆ ಹಾಗೂ ಉದ್ಯಮ ಪರಿಸರದಲ್ಲಿ AI ಏಜೆಂಟ್‌ಗಳು ಮತ್ತು ಆಟೋನಮಸ್ ಸಿಸ್ಟಮ್ಸ್ ವಿಕಸನಗೊಳ್ಳುತ್ತಿರುವ ಪಾತ್ರದ ಮೇಲಿನ ಪ್ರಗತಿಯ ಕುರಿತು ಗಮನ ಹರಿಸಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಜರ್ಮನಿಯ ತುರಿಂಗಿಯಾ ಪ್ರಾಂತ್ಯದ ಮಿನಿಸ್ಟರ್-ಪ್ರೆಸಿಡೆಂಟ್ ಆದ ಮಾರಿಯೋ ವೋಯಿಗ್ಟ್ ಅವರು, “SAP Labs India ಕ್ಕೆ ಭೇಟಿ ನೀಡಿದ್ದು ಮತ್ತು ಬೆಂಗಳೂರನ್ನು ವಿಶ್ವದ ಪ್ರಮುಖ ತಂತ್ರಜ್ಞಾನ ಹಬ್‌ಗಳಲ್ಲಿ ಒಂದನ್ನಾಗಿ ಮಾಡಿರುವ ನಾವೀನ್ಯತೆ ಹಾಗೂ ಎಂಜಿನಿಯರಿಂಗ್ ಶ್ರೇಷ್ಠತೆಯ ವ್ಯಾಪ್ತಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದು ಅತ್ಯಂತ ಸ್ಪೂರ್ತಿದಾಯಕವಾಗಿತ್ತು. ತುರಿಂಗಿಯಾ ಪ್ರಾಂತ್ಯಕ್ಕೆ ಈ ಭೇಟಿಯು ನಾವೀನ್ಯತೆ, ಬೆಳವಣಿಗೆ ಮತ್ತು ಪ್ರತಿಭೆಗಾಗಿ ದೃಢವಾದ ಪಾಲುದಾರಿಕೆಗಳನ್ನು ನಿರ್ಮಿಸುವ ಕುರಿತಾಗಿದೆ.
ತುರಿಂಗಿಯಾ ಪ್ರಾಂತ್ಯವು ಫೋಟೋನಿಕ್ಸ್, ಸೆಮಿಕಂಡಕ್ಟರ್ಸ್, ಸುಧಾರಿತ ಉತ್ಪಾದನೆ ಮತ್ತು ಅಪ್ಲೈಡ್ ರಿಸರ್ಚ್‌ನಲ್ಲಿ ವಿಶ್ವದರ್ಜೆಯ ಪರಿಣತಿಯನ್ನು ಹೊಂದಿದೆ. ಕರ್ನಾಟಕದ ಕ್ರಿಯಾಶೀಲ ಡೈನಮಿಕ್ ಟೆಕ್ನಾಲಜಿ ಇಕೋಸಿಸ್ಟಂ ಜೊತೆಗೆ ಸೇರಿ, ಇದು ವ್ಯವಹಾರಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗಕ್ಕಾಗಿ ಬಲವಾದ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸಾಮರ್ಥ್ಯಗಳನ್ನು ಪರಸ್ಪರ ಜೋಡಿಸುವ ಮೂಲಕ, ನಾವು ನಾವೀನ್ಯತೆಯನ್ನು ಮುನ್ನಡೆಸಬಹುದು, ನಮ್ಮ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಮತ್ತು ಭಾರತ ಹಾಗೂ ತುರಿಂಗಿಯಾ ನಡುವಿನ ಪಾಲುದಾರಿಕೆಯನ್ನು ಗಟ್ಟಿಗೊಳಿಸಬಹುದು. ಮತ್ತು ಕೊನೆಯದಾಗಿ, ಇಂದಿನ ಮರಗಳನ್ನು ನೆಡುವ ಉಪಕ್ರಮವು ಒಂದು ಶಕ್ತಿಯುತ ಸಂಕೇತವಾಗಿದೆ: ಜರ್ಮನಿಯ ಹಸಿರು ಹೃದಯವಾದ ತುರಿಂಗಿಯಾವು ಭಾರತದಲ್ಲಿ ಬೇರುಗಳನ್ನು ಬಿಡುತ್ತಿದೆ,” ಎಂದು ಹೇಳಿದರು.
SAP Labs India ದ ಎಂಡಿ (MD) ಮತ್ತು ಇಂಡೊ-ಜರ್ಮನ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾದ ಸಿಂಧು ಗಂಗಾಧರನ್ ಅವರು, “ಮಿನಿಸ್ಟರ್-ಪ್ರೆಸಿಡೆಂಟ್ ಮಾರಿಯೋ ವೋಯಿಗ್ಟ್ ಅವರನ್ನು SAP Labs India ಕ್ಕೆ ಸ್ವಾಗತಿಸಲು ಮತ್ತು ಭಾರತದಿಂದ ಜಗತ್ತಿಗಾಗಿ ನಿರ್ಮಾಣವಾಗುತ್ತಿರುವ ಎಂಜಿನಿಯರಿಂಗ್ ಪ್ರತಿಭೆ, ನಾವೀನ್ಯತೆ ಹಾಗೂ ತಂತ್ರಜ್ಞಾನದ ಪರಿಣತಿಯ ವ್ಯಾಪ್ತಿಯನ್ನು ಪ್ರದರ್ಶಿಸಲು ನಾವು ಹೆಮ್ಮೆಪಡುತ್ತೇವೆ. ಭಾರತ ಮತ್ತು ಜರ್ಮನಿ ದೇಶಗಳು ಎಂಜಿನಿಯರಿಂಗ್ ಶ್ರೇಷ್ಠತೆ, ನಾವೀನ್ಯತೆ ಹಾಗೂ ಕೈಗಾರಿಕಾ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಬಲವಾದ ಬದ್ಧತೆಯನ್ನು ಹೊಂದಿರುವ ದೀರ್ಘಕಾಲದ ಸಂಬಂಧವನ್ನು ಹಂಚಿಕೊಂಡಿವೆ. AI ಮತ್ತು ಡಿಜಿಟಲ್ ತಂತ್ರಜ್ಞಾನಗಳು ಜಾಗತಿಕವಾಗಿ ಉದ್ಯಮಗಳನ್ನು ಮರುರೂಪಿಸುತ್ತಿರುವುದರಿಂದ, ಎರಡೂ ದೇಶಗಳು ಸಂಶೋಧನೆ, ಪ್ರತಿಭಾ ವಿಕಸನ, ಉದ್ಯಮ ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದಾದ್ಯಂತ ಸಹಯೋಗವನ್ನು ಗಟ್ಟಿಗೊಳಿಸಲು ಅಪಾರ ಅವಕಾಶಗಳಿವೆ.
SAP ನ ಜಾಗತಿಕ ಎಂಜಿನಿಯರಿಂಗ್ ಮತ್ತು ಉತ್ಪನ್ನದ ಉದ್ಯಮದಲ್ಲಿ SAP Labs India ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿನ ತಂಡಗಳು ವಿಶ್ವಾದ್ಯಂತದ ವಿವಿಧ ಉದ್ಯಮಗಳ ವ್ಯಾಪಾರಗಳು ಮತ್ತು ಗ್ರಾಹಕರು ಹೆಚ್ಚು ಚೇತರಿಸಿಕೊಳ್ಳಲು, ಬುದ್ಧಿವಂತರಾಗಲು ಹಾಗೂ ಭವಿಷ್ಯಕ್ಕೆ ಸಿದ್ಧರಾಗಲು ಸಹಾಯ ಮಾಡುವ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ,” ಎಂದು ಹೇಳಿದರು.
SAP Labs India ಸಂಸ್ಥೆಯು ತನ್ನ ಪ್ರಧಾನ ಕಚೇರಿಯ ಹೊರಗಿರುವ SAP ನ ಅತಿ ದೊಡ್ಡ R&D ಕೇಂದ್ರವಾಗಿದೆ ಮತ್ತು ಇದು SAP ನ ಜಾಗತಿಕ ಎಂಜಿನಿಯರಿಂಗ್ ಹಾಗೂ ಉತ್ಪನ್ನ ಅಭಿವೃದ್ಧಿ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದೆ. ಭಾರತದಲ್ಲಿನ ತಂಡಗಳು ಜಾಗತಿಕವಾಗಿ ವಿವಿಧ ಉದ್ಯಮಗಳಾದ್ಯಂತ ಗ್ರಾಹಕರಿಗೆ ಸೇವೆ ಸಲ್ಲಿಸುವ ಬೃಹತ್ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುತ್ತಿವೆ. ಈ ಭೇಟಿಯು ಭಾರತದ GCC ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಪರಿಪಕ್ವತೆಯನ್ನು ಸಹ ಪ್ರತಿಬಿಂಬಿಸುತ್ತದೆ, ಇದು ಉದ್ಯಮಗಳಿಗೆ ಉತ್ಪನ್ನ ನಾವೀನ್ಯತೆ, ಎಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಡಿಜಿಟಲ್ ರೂಪಾಂತರದ ಕಾರ್ಯತಂತ್ರದ ಚಾಲಕ ಶಕ್ತಿಯಾಗಿ ವಿಕಸನಗೊಳ್ಳುತ್ತಾ ಸಾಗಿದೆ.
SAP ಕುರಿತು ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್ ಮತ್ತು ಬಿಸಿನೆಸ್ AI ನಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ SAP (NYSE:SAP), ವ್ಯವಹಾರ ಮತ್ತು ತಂತ್ರಜ್ಞಾನದ ಸಂಗಮ ಸ್ಥಾನದಲ್ಲಿ ನಿಲ್ಲುತ್ತದೆ. ಹಣಕಾಸು, ಪ್ರೊಕ್ಯೂರ್‌ಮೆಂಟ್, HR, ಸಪ್ಲೈ ಚೇನ್ ಮತ್ತು ಗ್ರಾಹಕ ಅನುಭವದಾದ್ಯಂತ ವ್ಯಾಪಿಸಿರುವ ವ್ಯವಹಾರದ ನಿರ್ಣಾಯಕ ಕಾರ್ಯಾಚರಣೆಗಳನ್ನು ಒಟ್ಟುಗೂಡಿಸುವ ಮೂಲಕ, ಸಂಸ್ಥೆಗಳು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಹೊರತರಲು 50 ಕ್ಕೂ ಹೆಚ್ಚು ವರ್ಷಗಳಿಂದ SAP ಅನ್ನು ನಂಬಿವೆ. ಹೆಚ್ಚಿನ ಮಾಹಿತಿಗಾಗಿ, www.sap.com ಗೆ ಭೇಟಿ ನೀಡಿ.

