ಶಿಕ್ಷಕರ ಸೇವೆ ಸ್ಮರಿಸಿ ಗೌರವ ಅಭಿನಂದನೆ ಕಾರ್ಯಕ್ರಮ

0
11

ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ (ರಿ) ಹೊಸಬೆಟ್ಟು ಸುರತ್ಕಲ್ ಶ್ರೀ ಗುರುರಾಘವೇಂದ್ರ ಮಠ ಕುಳಾಯಿ ಹೊಸಬೆಟ್ಟು ಮಂಗಳೂರು ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಬದುಕಿನ ಸಮಯವನ್ನು ಶಾಲೆ – ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸವೆಸಿ ತಾನು ಉರಿದು ಪರರ ಬೆಳಗುವ ಶಿಕ್ಷಕರ ಪರಿಶ್ರಮಕ್ಕೆ ಸದಾ ಅಭಾರಿಗಳು ನಾವು ಎಂದು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ರವರು ಶಿಕ್ಷಕರ ದಿನಾಚರಣೆಯ ಶುಭಾಶಯ ಗಳನ್ನು ಸಲ್ಲಿಸಿದರು.

ಪಿ ಪಿ ರಾವ್, ಶ್ರೀ ವಿಶ್ವೇಶ್ವರ ಬದವಿದೆ, ಕೆ ಕಲಾವತಿ, ರಾಘವೇಂದ್ರ ಎಚ್ ವಿ ವಿಶ್ವೇಶ್ವರ ಕಾರಂತ್, ರಾಮಚಂದ್ರ ಹೆಬ್ಬಾರ್, ಬಿ ದತ್ತಾತ್ರೇಯ, ಟಿ ಏನ್ ರಮೇಶ, ಶುಭಕರಣ್ ಮುಂತಾದವರು ಉಪಸ್ಥಿತರಿದ್ದರು.