ಕಲಾಕುಂಚದಿಂದ ಕವನ ಸಂಕಲನಕ್ಕೆ ಕವನಗಳಿಗೆ ಆಹ್ವಾನ

0
4

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷ ಈಗಾಗಲೇ ಕಾವ್ಯ ಕುಂಚ ಭಾಗ 1,2,3,4,5,6 ಕವನ ಸಂಕಲನ ಲೋಕಾರ್ಪಣೆ ಆಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಕಾವುಕುಂಚ 7ನೇ ಭಾಗದ ಕವನ ಸಂಕಲನ ಸಿದ್ಧತೆ ನಡೆಯುತ್ತಿದೆ. ದಯವಿಟ್ಟು ಕವಿ, ಕವಯತ್ರಿಯರು 15 ರಿಂದ 20 ಸಾಲುಗಳಲ್ಲಿ ಒಂದು ಕವನ ಬರೆದು ಕವನ ಬರೆಯುವ ವಿಷಯ ಆಯ್ಕೆ ಕವಿಗಳದ್ದು ಅವರ ಭಾವಚಿತ್ರ ಮನೆಯ ಪೂರ್ಣಪ್ರಮಾಣದ ವಿಳಾಸ ವ್ಯಾಟ್ಸಪ್ ನಂಬರನ್ನು ಈ ಕೆಳಗಿನ ಸನೀಹವಾಣಿಗೆ ಕಳಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.

ಕವನ ಸಂಕಲನಕ್ಕೆ ಕೊಟ್ಟವರಿಗೆ ರಾಜ್ಯ ಮಟ್ಟದ ಕವಿಗೋಷ್ಠಿಗೆ ಸುವರ್ಣಾವಕಾಶ ಇರುತ್ತದೆ. ಕವನ ಕಳಿಸುವ ವ್ಯಾಟ್ಸಪ್ ಸಂಖ್ಯೆ 9538732777 ಹೆಚ್ಚಿನ ಮಾಹಿತಿಗೆ ಈ ಮೇಲಿನ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಸಮಿತಿ ಸದಸ್ಯರಾದ ಶ್ರೀಮತಿ ಸವಿತಾ ವಿಜಯಕುಮಾರ್ ವಿನಂತಿಸಿದ್ದಾರೆ.