ಮನೆಗೊಂದು ಕನ್ನಡ ಪತ್ರಿಕೆ – ಮನೆಗೆರಡು ವಿವಿಧ ಭಾಷಾ ಪತ್ರಿಕೆ ಉಳಿಸಿ ಬೆಳೆಸುವ ಪತ್ರಿಕಾ ಪ್ರತಿಜ್ಞೆ
ಮಂಗಳೂರಿನಲ್ಲಿ 1843 ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಕನ್ನಡದ ಪ್ರಥಮ ಪತ್ರಿಕೆ ಮುದ್ರಣಗೊಂಡಿತ್ತು. ಕನ್ನಡ ಪತ್ರಿಕೋದ್ಯಮದ 183 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 2026 ಜುಲೈ 1 ರಿಂದ 2027 ಜುಲೈ 1ರ ತನಕ ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ ನಮ್ಮ ಹೆಮ್ಮೆ” ಘೋಷಣೆಯೊಂದಿಗೆ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ.
ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ (1990-2026) ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29 ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ -2026 ಮತ್ತು ಕೇರಳ – ಕರ್ನಾಟಕ ಉತ್ಸವ ಹಾಗೂ ಕೇರಳ- ಕರ್ನಾಟಕ ಭವನದ ಶಿಲಾನ್ಯಾಸ ಸಮಾರಂಭದಲ್ಲಿ “ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ” ಅಸ್ತಿತ್ವಕ್ಕೆ ಬರಲಿದೆ.
ಕಾಸರಗೋಡು ಜಿಲ್ಲಾ ಪತ್ರಿಕಾ ಮ್ಯೂಸಿಯಂನ ದಾಖಲೆ ಸಂಗ್ರಹಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ 2026 ರ ಮೊದಲು ಪ್ರಕಟಗೊಂಡ ಎಲ್ಲಾ ಪತ್ರಿಕೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಪತ್ರಿಕಾ ಬಂಧುಗಳು, ಪತ್ರಿಕಾ ಮಿತ್ರರು,ಸಾರ್ವಜನಿಕರು ಕನ್ನಡ ಪತ್ರಿಕೆಗಳನ್ನು ಪ್ರಾರಂಭಿಸಿದ ಪ್ರಕಾಶಕರು, ಮುದ್ರಕರು, ಸಂಪಾದಕರು ಅವರ ಕುಟುಂಬಸ್ಥರು ಊರು ಪರವೂರಿನಲ್ಲಿರುವ ಅವರ ಬಂಧು ಮಿತ್ರರು ತಮ್ಮಲ್ಲಿರುವ ಪತ್ರಿಕಾ ಮುದ್ರಣ ಪ್ರತಿ ಮತ್ತು ಸಮಗ್ರ ಪತ್ರಿಕಾ ಮಾಹಿತಿಗಳನ್ನು ಬರಹ ಮೂಲಕ ಕಳುಹಿಸಿ, ಸಹಕರಿಸಲು ವಿನಂತಿಸಲಾಗಿದೆ.
ಪತ್ರಿಕಾ ಸ್ಥಾಪಕರು, ಸಂಪಾದಕರು, ಪ್ರಕಾಶಕರು, ಮುದ್ರಕರ ಕುರಿತು ಭಾವಚಿತ್ರದೊಂದಿಗೆ ನುಡಿ ಚಿತ್ರ,ಬರಹ,ಪತ್ರಿಕೆ ಎಷ್ಟು ವರ್ಷಕಾಲ ಮುದ್ರಣಗೊಂಡಿರುವ ಮಾಹಿತಿಗಳು,ಪತ್ರಿಕೆ ನಡೆದು ಬಂದ ದಾರಿ,ಪತ್ರಿಕಾ ಇತಿಹಾಸ, ಪತ್ರಿಕಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಅಧ್ಯಯನ ಬರಹ, ಲೇಖನ ರೂಪದಲ್ಲಿ ಕಳುಹಿಸಬಹುದು.ಈ ಎಲ್ಲಾ ಬರಹ,ಲೇಖನಗಳು ಸಂಗ್ರಹವಾದ ನಂತರ ಕಾಸರಗೋಡು ಪತ್ರಿಕಾ ಇತಿಹಾಸದ ಕುರಿತು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯಿದೆ.
ಮನೆಗೊಂದು ಶಾಲೆಗೊಂದು ಕನ್ನಡ ಪತ್ರಿಕಾ ವಿತರಣಾ ಅಭಿಯಾನಕ್ಕೆ ಸಹಯೋಗ ಸಹಕಾರಕ್ಕೆ ಆಹ್ವಾನ :-
ಕೇರಳ -ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆ, ಹೈಸ್ಕೂಲು ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳನ್ನು ಉಚಿತವಾಗಿ ನೀಡಿ ದಿನ ಪತ್ರಿಕೆಗಳನ್ನು ಶಾಲಾ ತರಗತಿಯ ಒಂದು ಸಂದರ್ಭದಲ್ಲಿ ಕಡ್ಡಾಯವಾಗಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ಪತ್ರಿಕಾ ಸುದ್ದಿಗಳನ್ನು ಪತ್ರಿಕಾ ಬರಹಗಳನ್ನು ಓದಿ ಹೇಳುವ ಅವಕಾಶವನ್ನು ಕಲ್ಪಿಸಬೇಕಾಗಿದೆ.ಮಕ್ಕಳಲ್ಲಿ ನಿಧಾನವಾಗಿ ನಮ್ಮ ಕನ್ನಡ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಅಭ್ಯಾಸವನ್ನು ಬೆಳೆಸಬೇಕಾಗಿದೆ.ಇದರಿಂದ ವಿದ್ಯಾರ್ಥಿಗಳು,ಮಕ್ಕಳು ಓದುವ ಬರೆಯುವ ಚರ್ಚಿಸುವ ಮತ್ತು ಪದ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶ ನೀಡಬೇಕಾಗಿದೆ. ರಾಜ್ಯ ಜಿಲ್ಲಾ ತಾಲೂಕು ಪತ್ರಿಕೆಗಳನ್ನು ಸರಕಾರ, ಅನುದಾನಿತ,ಖಾಸಗಿ ಶಾಲಾ, ಕಾಲೇಜುಗಳ ಆಡಳಿತ ವರ್ಗದವರು, ಕಡ್ಡಾಯವಾಗಿ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಮೂಲಕ ಪತ್ರಿಕೆಗಳನ್ನು ಹಣ ಕೊಟ್ಟು ವಿದ್ಯಾರ್ಥಿಗಳಿಗೆ ಪತ್ರಿಕಾ ಸುದ್ದಿಯನ್ನು ಪಸರಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಕೇರಳ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಪ್ರತ್ಯೇಕವಾದ ಆದೇಶವನ್ನು ಹೊರಡಿಸುವ ಅವಶ್ಯಕತೆಯಿದೆ.ಈ ಕುರಿತು ಕರ್ನಾಟಕ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಾಶಕರು, ಸಂಪಾದಕರು, ರಾಜ್ಯ ಜಿಲ್ಲಾ ತಾಲೂಕು ಗ್ರಾಮಗಳಲ್ಲಿರುವ ಶಾಲಾ, ಕಾಲೇಜುಗಳಿಗೆ ತಾವು ಕಲಿತ ಶಾಲೆಗೆ ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ದಾನಿಗಳ ಮೂಲಕ ಪತ್ರಿಕೆಗೆ ಹಣಕೊಟ್ಟು ನಿರಂತರವಾಗಿ ದಿನ ಪತ್ರಿಕೆಗಳನ್ನು ವಿತರಿಸಬೇಕು ಇದರಿಂದಾಗಿ ಪತ್ರಿಕೆಗೂ ಸಹಕಾರವಾಗಲಿದೆ.
ತಮ್ಮ ಗ್ರಾಮ ವಾರ್ಡ್ ನಲ್ಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪತ್ರಿಕೆಗಳನ್ನು ವಿತರಿಸುವ ಯೋಜನೆಗೆ ಪತ್ರಿಕಾ ಅಭಿಮಾನಿಗಳು, ಪತ್ರಿಕಾ ಬಂಧು ಮಿತ್ರರು ಪ್ರೋತ್ಸಾಹಿಸಬೇಕು. ಸ್ಥಳೀಯವಾಗಿ ಪತ್ರಿಕೆಯ ಪ್ರಾಯೋಜಕತ್ವ ನೀಡಿ ಬೆಂಬಲಿಸಬೇಕಾಗಿದೆ.
ಸಂಪರ್ಕ :- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಪಾರೆಕಟ್ಟೆ, ಕನ್ನಡ ಗ್ರಾಮ ರಸ್ತೆ ಕಾಸರಗೋಡು -671121
ಮೊಬೈಲ್ -9448572016

