ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ -ನಮ್ಮ ಹೆಮ್ಮೆ” ಘೋಷಣೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಾಜ್ಯಮಟ್ಟದಲ್ಲಿ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ “

0
21


( ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ- ಕರ್ನಾಟಕ ಉತ್ಸವ ಸಮಿತಿ ಆಯೋಜನೆ )
ಮನೆಗೊಂದು ಕನ್ನಡ ಪತ್ರಿಕೆ –
ಮನೆಗೆರಡು ವಿವಿಧ ಭಾಷಾ ಪತ್ರಿಕೆ ಉಳಿಸಿ ಬೆಳೆಸುವ ಪತ್ರಿಕಾ ಪ್ರತಿಜ್ಞೆ
ಮಂಗಳೂರಿನಲ್ಲಿ 1843 ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಕನ್ನಡದ ಪ್ರಥಮ ಪತ್ರಿಕೆ ಮುದ್ರಣಗೊಂಡಿತ್ತು. ಕನ್ನಡ ಪತ್ರಿಕೋದ್ಯಮದ 183 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 2026 ಜುಲೈ 1 ರಿಂದ 2027 ಜುಲೈ 1ರ ತನಕ ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ ನಮ್ಮ ಹೆಮ್ಮೆ” ಘೋಷಣೆಯೊಂದಿಗೆ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ. ಕೇರಳ- ಕರ್ನಾಟಕ ರಾಜ್ಯದಾದ್ಯಂತ ಪ್ರಕಟವಾಗುವ ಎಲ್ಲಾ ರಾಜ್ಯ ಜಿಲ್ಲಾ ತಾಲೂಕು ಮಟ್ಟದ ಪತ್ರಿಕಾ ಕಚೇರಿಗೆ ಭೇಟಿ ನೀಡಿ ಪತ್ರಿಕಾ ಪ್ರಕಾಶಕರು,ಸಂಪಾದಕರು, ಆಡಳಿತ ವರ್ಗದವರೊಂದಿಗೆ ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ ) ಫ್ರೀಲಾನ್ಸ್ ಪತ್ರಕರ್ತರ ಸಂಘ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಕೇರಳ-ಕರ್ನಾಟಕ ಕನ್ನಡ ಸಾಂಸ್ಕೃತಿಕ ರಾಯಭಾರಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ದುಂಡು ಮೇಜಿನ ಪರಿಷತ್ತು ಪತ್ರಿಕಾ ಚಿಂತನಾ ಸಭೆಯನ್ನು ನಡೆಸಲಾಗುವುದು.
ಕೇರಳ – ಕರ್ನಾಟಕ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಪ್ರಕಟವಾಗುವ ಪತ್ರಿಕೆಯನ್ನು ದಿನಂಪ್ರತಿ ಓದಿನೊಂದಿಗೆ ಜೀವನ ಪಯಣ ಪ್ರಾರಂಭಿಸೋಣ. ನಾವು ನಮ್ಮ ಕನ್ನಡ ಪತ್ರಿಕೋದ್ಯಮವನ್ನು ಉಳಿಸಿ,ಬೆಳೆಸುವುದಕ್ಕಾಗಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೆಯನ್ನು ಕೊಂಡು ಓದುವ ಹವ್ಯಾಸ ಪರಂಪರೆಯನ್ನು ತೊಡಗಿಸಬೇಕಾಗಿದೆ.”ನಮ್ಮ ಪತ್ರಿಕೆ- ನಮ್ಮ ಹೆಮ್ಮೆ” ಆಶಯದೊಂದಿಗೆ ಓದುಗರ ನೆಲೆಯಲ್ಲಿ ಪತ್ರಿಕಾ ಧರ್ಮ ಮತ್ತು ಪತ್ರಿಕಾ ಜವಬ್ದಾರಿಯನ್ನು ಜನ ಸಮುದಾಯ ಪಾಲಿಸಬೇಕಾಗಿದೆ.
ಮುಂಜಾವು ನಮ್ಮ ಮನೆಗೆ ಬರುವ ಪತ್ರಿಕಾ ವಿತರಕ -ಪತ್ರಿಕಾ ಎಜೆoಟ್ ಅವರ ಬದುಕನ್ನು ಗೌರವಿಸಬೇಕು. ಪ್ರತಿಯೊoದು ಕುಟುಂಬದ ಸದಸ್ಯನು ಕನಿಷ್ಠ ಮನೆಗೊಂದು ಕನ್ನಡ ಪತ್ರಿಕೆಯನ್ನು ಅಥವಾ ಮನೆಗೆರಡು ವಿವಿಧ ಭಾಷಾ ಪತ್ರಿಕೆಯನ್ನು ಕೊಂಡುಕೊಳ್ಳುವ ಅಭಿಯಾನಕ್ಕೆ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು, ಬಂಧು, ಮಿತ್ರರು,ಪತ್ರಿಕಾ ಅಭಿಮಾನಿಗಳು ಕೈಜೋಡಿಸಲು ವಿನಂತಿಸಲಾಗಿದೆ.
ನಿರಂತರವಾಗಿ ವರ್ಷಪೂರ್ತಿ ಕನ್ನಡ ಪತ್ರಿಕೆಯನ್ನು ಹಣಕೊಟ್ಟು ಓದುವ ಪತ್ರಿಕಾ ಓದುಗರ ಪ್ರತಿ ಮನೆಯ ಕುಟುಂಬಕ್ಕೆ “ಕನ್ನಡ ಪತ್ರಿಕಾ ಗೌರವ ಪತ್ರ”ವನ್ನು ತಮ್ಮ ಪ್ರದೇಶದ ಪತ್ರಿಕಾ ವಿತರಕ, ಎಜೆoಟ್ ನ ಶಿಫಾರಸು ಮೇರೆಗೆ ಪತ್ರಿಕಾ ಪ್ರಕಾಶಕರು, ಆಡಳಿತವರ್ಗ, ಸಂಪಾದಕರ ಮೂಲಕ ನೀಡಲು ಉದ್ದೇಶಿಸಲಾಗಿದೆ.
ಆಯೋಜನೆ :- ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ (1990-2026)ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘದ 42 ನೇ ಸಂಸ್ಥಾಪನಾ (1984-2026) ವರ್ಷಾಚರಣೆ ಮತ್ತು ಕಾಸರಗೋಡು ಜಿಲ್ಲೆ ರೂಪೀಕರಣಗೊಂಡು 42 ವರ್ಷ (1984-2026) ಪೂರೈಸುತ್ತಿರುವ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 7 ಮತ್ತು 8 ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ -2026 ಮತ್ತು ಕೇರಳ – ಕರ್ನಾಟಕ ಉತ್ಸವ ಹಾಗೂ ಕೇರಳ- ಕರ್ನಾಟಕ ಭವನದ ಶಿಲಾನ್ಯಾಸ ಸಮಾರಂಭದಲ್ಲಿ “ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ” ಅಸ್ತಿತ್ವಕ್ಕೆ ಬರಲಿದೆ.
ಕಾಸರಗೋಡು ಜಿಲ್ಲಾ ಪತ್ರಿಕಾ ಮ್ಯೂಸಿಯಂನ ದಾಖಲೆ ಸಂಗ್ರಹಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ 2026ರ ಮೊದಲು ಪ್ರಕಟಗೊಂಡ ಎಲ್ಲಾ ಪತ್ರಿಕೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವಉದ್ದೇಶದಿಂದ ಪತ್ರಿಕಾ ಬಂಧುಗಳು, ಪತ್ರಿಕಾ ಮಿತ್ರರು,ಸಾರ್ವಜನಿಕರು ಕನ್ನಡ ಪತ್ರಿಕೆಗಳನ್ನು ಪ್ರಾರಂಭಿಸಿದ ಪ್ರಕಾಶಕರು, ಮುದ್ರಕರು, ಸಂಪಾದಕರು ಅವರ ಕುಟುಂಬಸ್ಥರು ಊರು ಪರವೂರಿನಲ್ಲಿರುವ ಅವರ ಬಂಧು ಮಿತ್ರರು ತಮ್ಮಲ್ಲಿರುವ ಪತ್ರಿಕಾ ಮುದ್ರಣ ಪ್ರತಿ ಮತ್ತು ಸಮಗ್ರ ಪತ್ರಿಕಾ ಮಾಹಿತಿಗಳನ್ನು ಬರಹ ಮೂಲಕ ಕಳುಹಿಸಿ, ಸಹಕರಿಸಲು ವಿನಂತಿಸಲಾಗಿದೆ.
ಪತ್ರಿಕಾ ಸ್ಥಾಪಕರು, ಸಂಪಾದಕರು, ಪ್ರಕಾಶಕರು, ಮುದ್ರಕರ ಕುರಿತು ಭಾವಚಿತ್ರದೊಂದಿಗೆ ನುಡಿ ಚಿತ್ರ,ಬರಹ,ಪತ್ರಿಕೆ ಎಷ್ಟು ವರ್ಷಕಾಲ ಮುದ್ರಣಗೊಂಡಿರುವ ಮಾಹಿತಿಗಳು,ಪತ್ರಿಕೆ ನಡೆದು ಬಂದ ದಾರಿ,ಪತ್ರಿಕಾ ಇತಿಹಾಸ, ಪತ್ರಿಕಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಅಧ್ಯಯನ ಬರಹ, ಲೇಖನ ರೂಪದಲ್ಲಿ ಕಳುಹಿಸಬಹುದು.ಈ ಎಲ್ಲಾ ಬರಹ,ಲೇಖನಗಳು ಸಂಗ್ರಹವಾದ ನಂತರ ಕಾಸರಗೋಡು ಪತ್ರಿಕಾ ಇತಿಹಾಸದ ಕುರಿತು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯಿದೆ.
ಮನೆಗೊಂದು ಶಾಲೆಗೊಂದು ಕನ್ನಡ ಪತ್ರಿಕಾ ವಿತರಣಾ ಅಭಿಯಾನಕ್ಕೆ ಸಹಯೋಗ ಸಹಕಾರಕ್ಕೆ ಆಹ್ವಾನ :- ಕೇರಳ -ಕರ್ನಾಟಕ ಸರಕಾರ, ಜಿಲ್ಲಾಡಳಿತ, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ, ತಾಲೂಕು ಸಂಘಗಳು ಹಾಗೂ ಪತ್ರಿಕಾ ಆಡಳಿತ ವರ್ಗದವರು, ಪ್ರಕಾಶಕರು, ಸಂಪಾದಕರು, ಸಂಘ ಸಂಸ್ಥೆಗಳ ಸಹಯೋಗ, ಸಹಕಾರದಲ್ಲಿ ಮನೆಗೊಂದು- ಶಾಲೆಗೊಂದು ಕನ್ನಡ ಪತ್ರಿಕಾ ವಿತರಣಾ ಅಭಿಯಾನಕ್ಕೆ ಪತ್ರಿಕಾ ಪ್ರಕಾಶಕರು, ಸಂಪಾದಕರು ಆಡಳಿತ ವರ್ಗದವರನ್ನು ನಮ್ಮೊಂದಿಗೆ ಪ್ರೋತ್ಸಾಹಿಸುವಂತೆ ವಿನಂತಿಸಲಾಗಿದೆ.
ಕೇರಳ -ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆ, ಹೈಸ್ಕೂಲು ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳನ್ನು ಉಚಿತವಾಗಿ ನೀಡಿ ದಿನ ಪತ್ರಿಕೆಗಳನ್ನು ಶಾಲಾ ತರಗತಿಯ ಒಂದು ಸಂದರ್ಭದಲ್ಲಿ ಕಡ್ಡಾಯವಾಗಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ಪತ್ರಿಕಾ ಸುದ್ದಿಗಳನ್ನು ಪತ್ರಿಕಾ ಬರಹಗಳನ್ನು ಓದಿ ಹೇಳುವ ಅವಕಾಶವನ್ನು ಕಲ್ಪಿಸಬೇಕಾಗಿದೆ.ಮಕ್ಕಳಲ್ಲಿ ನಿಧಾನವಾಗಿ ನಮ್ಮ ಕನ್ನಡ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಅಭ್ಯಾಸವನ್ನು ಬೆಳೆಸಬೇಕಾಗಿದೆ.ಇದರಿಂದ ವಿದ್ಯಾರ್ಥಿಗಳು,ಮಕ್ಕಳು ಓದುವ ಬರೆಯುವ ಚರ್ಚಿಸುವ ಮತ್ತು ಪದ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶ ನೀಡಬೇಕಾಗಿದೆ. ರಾಜ್ಯ ಜಿಲ್ಲಾ ತಾಲೂಕು ಪತ್ರಿಕೆಗಳನ್ನು ಸರಕಾರ, ಅನುದಾನಿತ,ಖಾಸಗಿ ಶಾಲಾ, ಕಾಲೇಜುಗಳ ಆಡಳಿತ ವರ್ಗದವರು, ಕಡ್ಡಾಯವಾಗಿ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಮೂಲಕ ಪತ್ರಿಕೆಗಳನ್ನು ಹಣ ಕೊಟ್ಟು ವಿದ್ಯಾರ್ಥಿಗಳಿಗೆ ಪತ್ರಿಕಾ ಸುದ್ದಿಯನ್ನು ಪಸರಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಕೇರಳ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಪ್ರತ್ಯೇಕವಾದ ಆದೇಶವನ್ನು ಹೊರಡಿಸುವ ಅವಶ್ಯಕತೆಯಿದೆ.ಈ ಕುರಿತು ಕರ್ನಾಟಕ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಾಶಕರು, ಸಂಪಾದಕರು, ರಾಜ್ಯ ಜಿಲ್ಲಾ ತಾಲೂಕು ಗ್ರಾಮಗಳಲ್ಲಿರುವ ಶಾಲಾ, ಕಾಲೇಜುಗಳಿಗೆ ತಾವು ಕಲಿತ ಶಾಲೆಗೆ ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ದಾನಿಗಳ ಮೂಲಕ ಪತ್ರಿಕೆಗೆ ಹಣಕೊಟ್ಟು ನಿರಂತರವಾಗಿ ದಿನ ಪತ್ರಿಕೆಗಳನ್ನು ವಿತರಿಸಬೇಕು ಇದರಿಂದಾಗಿ ಪತ್ರಿಕೆಗೂ ಸಹಕಾರವಾಗಲಿದೆ.
ರಾಜ್ಯದಲ್ಲಿ ಪ್ರಕಟವಾಗುವ ಪ್ರಸಾರವಾಗುವ ಮಾರಾಟವಾಗುವ ಕನ್ನಡ, ಮಲಯಾಳಂ,ಇಂಗ್ಲಿಷ್ ಮತ್ತು ಇತರ ಭಾಷೆಯ ದಿನ ಪತ್ರಿಕೆ,ವಾರ ಪತ್ರಿಕೆ,ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆಗಳನ್ನು ಕೇಂದ್ರ,ರಾಜ್ಯ ಸರಕಾರಗಳ ಎಲ್ಲಾ ಕಚೇರಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತು, ಬ್ಲೋಕ್ ಪಂಚಾಯತು, ಗ್ರಾಮ ಪಂಚಾಯತುಗಳು,ಶಾಲಾ, ಕಾಲೇಜು,ಎಲ್ಲಾ ಬ್ಯಾಂಕುಗಳು,ಉದ್ಯಮ ವ್ಯವಹಾರದ ಸಂಸ್ಥೆಗಳು, ವ್ಯಾಪಾರ ವ್ಯವಸಾಯ ಸಂಘಟನೆಗಳು, ರೋಟರಿ, ಲಯನ್ಸ್ , ಜೇಸಿಸ್,ಸ್ವಯಂ ಸೇವಾ ಸಂಘಟನೆಗಳು ಕಡ್ಡಾಯವಾಗಿ ಪತ್ರಿಕೆಗಳನ್ನು ಕೊoಡುಕೊಳ್ಳಲು ಆದೇಶಿಸಬೇಕು. ತಮ್ಮ ಗ್ರಾಮ ವಾರ್ಡ್ ನಲ್ಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪತ್ರಿಕೆಗಳನ್ನು ವಿತರಿಸುವ ಯೋಜನೆಗೆ ಪತ್ರಿಕಾ ಅಭಿಮಾನಿಗಳು, ಪತ್ರಿಕಾ ಬಂಧು ಮಿತ್ರರು ಪ್ರೋತ್ಸಾಹಿಸಬೇಕು. ಸ್ಥಳೀಯವಾಗಿ ಪತ್ರಿಕೆಯ ಪ್ರಾಯೋಜಕತ್ವ ನೀಡಿ ಬೆಂಬಲಿಸಬೇಕಾಗಿದೆ.
ರಾಜ್ಯ ಜಿಲ್ಲಾ ತಾಲೂಕು ಪತ್ರಿಕೆಗಳಿಗೆ ಕಾರ್ಯನಿರತ ಪತ್ರಕರ್ತರಾಗಿ,ಫ್ರೀಲಾನ್ಸ್ ಪತ್ರಕರ್ತರಾಗಿ, ಹವ್ಯಾಸಿ ಪತ್ರಕರ್ತರಾಗಿ, ಅರೆಕಾಲಿಕ ವರದಿಗಾರರಾಗಿ, ನಿರಂತರವಾಗಿ ಪತ್ರಿಕಾ ಬರಹದ ಮೂಲಕ ಗುರುತಿಸಿಕೊಳ್ಳುವವರು ವಿವಿಧ ಸುದ್ದಿ ವಾಹಿನಿಗಳು, ಪತ್ರಿಕಾ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಗಳು, ಡಿಜಿಟಲ್ ಸುದ್ದಿ ಮಾಧ್ಯಮಗಳು,ಮಾಧ್ಯಮ ಮಿತ್ರರು, ಹಾಗೂ ಸಾಹಿತ್ಯಾಸಕ್ತರು,ರಾಜ್ಯದ ಎಲ್ಲಾ ಶಾಲಾ,ಕಾಲೇಜಿನ ಹಳೆ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು, ಸಾರ್ವಜನಿಕರು, ಅಧ್ಯಾಪಕರು, ವಿದ್ಯಾರ್ಥಿಗಳು,ಸಾಹಿತಿಗಳು, ಲೇಖಕರು,ಕವಿಗಳು, ಬರಹಗಾರರು,ಕಲಾವಿದರು ಸ್ವಯಂ ಪ್ರೇರಣೆಯಿಂದ ಪತ್ರಿಕಾ ಮಾಧ್ಯಮ ಕ್ಷೇತ್ರದ ಸೇವಾ ಕಾರ್ಯಕ್ಕೆ ಪ್ರೋತ್ಸಾಹಿಸಲಿದ್ದಾರೆ.
ಸಂಪರ್ಕ :- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಪಾರೆಕಟ್ಟೆ, ಕನ್ನಡ ಗ್ರಾಮ ರಸ್ತೆ ಕಾಸರಗೋಡು -671121
ಮೊಬೈಲ್ -9448572016
Email :-
Shivaramakasargod@gmail.com