ರಂಗಕಲಾವಿದ ದೇವ ನಾಗೇಶ್‌ಗೆ ರಂಗನಮನ: ಬೆಂಗಳೂರಿನಲ್ಲಿ ಯುವ ನಾಟಕೋತ್ಸವ-2026

0
11

ಬೆಂಗಳೂರು- ರಂಗ ಕಲಾವಿದ ದೇವ ನಾಗೇಶ್ ಅವರಿಗೆ ರಂಗನಮನ ಅಂಗವಾಗಿ ನಂದನ ಸಂಘಟನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ
ಯುವ ನಾಟಕೋತ್ಸವ – 2026 ವನ್ನು ದಿ.16 ಮತ್ತು 17 ರಂದು ಬೆಂಗಳೂರು ನಯನ ರಂಗಮಂದಿರದಲ್ಲಿ ನಡೆಯಲಿದೆ.

ದಿ.19 ರಂದು ಸಂಜೆ 5:00 ಕ್ಕೆ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ರಾಜ ರವಿಶಂಕರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಚಂದ್ರಶೇಖರ್,ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿ.ಎಂ ತಿಮ್ಮಯ್ಯ,ಸುಗಮ ಸಂಗೀತ ಗಾಯಕಿ ಶೀಲಾ ಗುರುನಾಥ್,ನಂದನ ಪ್ರಧಾನ ಕಾರ್ಯದರ್ಶಿ ಕೆ ವಿ ನಾರಾಯಣಸ್ವಾಮಿ ಪಾಲ್ಗೊಳ್ಳುವರು. ಚಂದನ್ ನೃತ್ಯ ತಂಡ ದವರಿಂದ ನೃತ್ಯ, 6:30ಕ್ಕೆ ವಿ.ಕೆ.ಎಂ. ಕಲಾವಿದರು ಅಭಿನಯಿಸುವ ಡಾ. ಚಂದ್ರಶೇಖರ್ ಕಂಬಾರರ ಸಂಗ್ಯಾ-ಬಾಳ್ಯಾ ನಾಟಕ ನಡೆಯಲಿದೆ.

ನಾಟಕವನ್ನು ಸಿ.ಎಂ. ತಿಮ್ಮಯ್ಯ ನಿರ್ದೆಶಿಸಿದ್ದಾರೆ. ಹಿನ್ನೆಲೆ ಗಾಯಕ ಲಕ್ಷ್ಮಣ್ ಸುವರ್ಣ, ತಬಲ: ರಾಮಣ್ಣ, ಹಿನ್ನೆಲೆ ಗಾಯಕಿ : ಶಶಿಕಲಾ,ತಮಟೆ : ಪ್ರವೀಣ್ ಪಾಲ್ಗೊಳ್ಳುವರು.

ದಿ.17 ರಂದು ಸಂಜೆ 5:00 ಕ್ಕೆ

ಶ್ರೀ ರಾಘವ ಕಲಾಸಂಗಮ (ರಿ)ಅವರಿಂದ ಸುಗಮ ಸಂಗೀತ ಸಂಜೆ 6:30 ಕ್ಕೆಭಾರತಿ ಕಲಾವೇದಿಕೆ ಅಭಿನಯಿಸುವ ಗೊರು ಚ ರ ಸಾಕ್ಷಿಕಲ್ಲು ನಾಟಕ ನಡೆಯಲಿದೆ.

ನಿರ್ದೇಶನವನ್ನು ಸಿ.ಎಂ. ತಿಮ್ಮಯ್ಯ ಮಾಡಿದ್ದಾರೆ. ಸಂಗೀತ: ಎಸ್ ತಿಮ್ಮಯ್ಯ (ಮಲ್ಲು), ಮಂಡ್ಯ ಮಹದೇವ್‌, ನಿತೀಶ್, ತಿಲಕ್, ದಿವ್ಯಶ್ರೀ, ಪವಿತ್ರ, ನಿಸರ್ಗ, ತೇಜಸ್, ಪ್ರೀತಮ್, ವೈಷ್ಣವಿ ದುರ್ಗಾ, ಕೀರ್ತಿ, ವಿಸ್ಮಯ, ಯಶ್ವಂತ್ ತೇಜ, ಜಾಹ್ನವಿ, ಹಾಗೂ ವಿ.ಕೆ.ಯಂ ಕಲಾವಿದರಾಗಿ ಪಾಲ್ಗೊಳ್ಳುವರು.

LEAVE A REPLY

Please enter your comment!
Please enter your name here