ವಿಶ್ವ ರಾಮಕ್ಷತ್ರಿಯ ಮಹಾಸಂಘ ಪದಾಧಿಕಾರಿಗಳಿಗೆ “ಭಿಕ್ಷು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “

0
14

ಕುಂದಾಪುರ : ಡಾ. ವಾಮನ್ ರಾವ್ ಬೇಕಲ್ -ಸಂದ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನ, ಕನ್ನಡ ಭವನ ಪ್ರಕಾಶನ ಸಮೂಹ ಸಂಸ್ಥೆಗಳು ರಾಮಕ್ಷತ್ರಿಯ ಸಮಾಜದ ಸಮಾಜ ಸೇವಾ ನಿರತ ಗಣ್ಯರೀಗೆ ನೀಡುತ್ತಿರುವ ಗೌರವಾನ್ವಿತ ಪ್ರಶಸ್ತಿಯಾದ “ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026.ನ್ನು ಸಾಮುದಾಯಿಕ, ಹಾಗೂ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸನ್ಮಾನ್ಯ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್ ಆರ್ ಶಶಿಧರ್ ನಾಯ್ಕ್, ಉದ್ಯಮಿ, ಧಾರ್ಮಿಕ ಮುಂದಾಳು ವಿ. ರಾ. ಮಹಾಸಂಘ ಉಪಾಧ್ಯಕ್ಷರಾದ ನಾಗರಾಜ್ ಕಲ್ಪತರು ಕುಂದಾಪುರ, ರಾಮಕ್ಷತ್ರಿಯ ಮಾಸ ಪತ್ರಿಕೆಯ ಮೂಲಕ ಇಡೀ ಸಮಾಜವನ್ನು ಪರಸ್ಪರ ಅರಿಯುವಂತೆ, ತಿಳಿಯುವಂತೆ ಮಾಡುತ್ತಿರುವ ಶ್ರೇಷ್ಠ ಸಾಧನೆಯನ್ನು ಮಾಡುತ್ತಿರುವ ಹಾಗೂ ವಿ. ರಾ. ಮಹಾಸಂಘ ಉಪಾಧ್ಯಕ್ಷರು ಆದ ಬಿ. ಎಮ್. ನಾಥ್. ಬೆಂಗಳೂರು, ವಿ. ಆರ್. ಎಸ್ ಕೋಶಾಧಿಕಾರಿ ಕರುಣಾಕರ ಉಡುಪಿ ಇವರುಗಳಿಗೆ ಕಾಸರಗೋಡು ಕನ್ನಡ ಭವನದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕೇಂದ್ರ ಕಚೇರಿ, ಕುಂದಾಪುರದ ಉದ್ಘಾಟನೆ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಪ್ರಶಸ್ತಿ ನೀಡಿ ಗೌರವಿಸಿದರು.

ಶಿವರಾಮ ಕಾಸರಗೋಡು ಹಾಗೂ ನಾಗರಾಜ್ ಮದ್ದೋಡಿ ಸನ್ಮಾನಿತರ ಬಗ್ಗೆ ಪರಿಚಯ ನೀಡಿದರು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಚಂದ್ರ ತೊಕ್ಕೊಟ್ಟು ನಿರ್ವಹಣೆ ಮಾಡಿದರು. ವಿ. ಆರ್. ಎಸ್ ಪ್ರದಾನ ಕಾರ್ಯದರ್ಶಿ ಶ್ರೀಧರ್ ಪಿ. ಎಸ್. ಸ್ವಾಗತಿಸಿ, ಆಡಳಿತ ಕಾರ್ಯದರ್ಶಿ ರಶ್ಮಿ ರಾಜ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here