Thursday, April 24, 2025
HomeUncategorizedಗೆಳತಿ ಮದುವೆಗೆ ಒಪ್ಪಲಿಲ್ಲ ಅಂತ ಮೇಕೆಯನ್ನ ವಿವಾಹವಾದ ಯುವಕ..!

ಗೆಳತಿ ಮದುವೆಗೆ ಒಪ್ಪಲಿಲ್ಲ ಅಂತ ಮೇಕೆಯನ್ನ ವಿವಾಹವಾದ ಯುವಕ..!

ಪ್ರೀತಿ ಮತ್ತು ಸಂಬಂಧಗಳು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿವೆ. ಆದರೆ ಕೆಲವರು ಪ್ರೀತಿಯಲ್ಲಿ ಫೆಲ್ಯೂರ್‌ ಅನುಭವಿಸುತ್ತಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅದರಂತೆ ಪ್ರೇಮ ಸಂಬಂಧದಲ್ಲಿ ಹಿನ್ನೆಡೆ ಅನುಭವಿಸಿದ ಈ ವ್ಯಕ್ತಿ ಮಾಡಿದ್ದನ್ನು ಕೇಳಿದರೆ ನೀವು ಶಾಕ್‌ ಆಗ್ತಿರಾ.
ಇದು ಒಬ್ಬ ಯುವಕನ ಕಥೆ. ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡು, ಬ್ರೇಕಪ್‌ ಮಾಡಿಕೊಂಡ. ಕೊನೆಗೆ, ಲವರ್‌ ಸಿಗಲ್ಲ, ಆಕೆಯನ್ನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ. ಆದರೆ ಒಬ್ಬ ಯುವತಿ ಅವನಿಗೆ ನೀಡಲು ಸಾಧ್ಯವಾಗದ ಪ್ರೀತಿಯನ್ನು ಅವನು ಮೂಕ ಜೀವಿಯಲ್ಲಿ ಕಂಡುಕೊಂಡನು. ಅಲ್ಲದೆ, ಮೇಕೆಯನ್ನು ಮದುವೆಯಾಗಲು ನಿರ್ಧರಿಸಿದನು.

ಅದರಂತೆ ಪೂರ್ಣ ವಿಧಿ-ವಿಧಾನಗಳೊಂದಿಗೆ ಆ ಯುವಕ ಮೇಕೆಯನ್ನು ಮದುವೆಯಾಗಿದ್ದಾನೆ.. ಆಡಿಗೆ ಮಾಲೆ ಹಾಕಿ, ಅದರ ಹಣೆಗೆ ಸಿಂಧೂರ ಹಚ್ಚಿ, ಅದನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿದ್ದಾನೆ. ಈ ವಿಶಿಷ್ಟ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಈ ಪೋಸ್ಟ್‌ ಅನ್ನು famous.pulse ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿವೆ, ಒಬ್ಬ ಬಳಕೆದಾರರು ‘ಮೇಡ್ ಫಾರ್ ಈಚ್ ಅದರ್’ ಎಂದು ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗ ‘ನಿನ್ನ ನೋವು ನನಗೆ ಅರ್ಥವಾಗುತ್ತದೆ’ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

RELATED ARTICLES
- Advertisment -
Google search engine

Most Popular