ಉಡುಪಿಯಲ್ಲಿ ಅ.4ರಂದು ‘ಆಮಂತ್ರಣ’ ವರ್ಷದ ಹರ್ಷೋತ್ಸವ

0
25

ಉಡುಪಿ: ಆಮಂತ್ರಣ ಉಡುಪಿ ಜಿಲ್ಲೆ ಹಾಗೂ ಕುಂದಾಪುರ, ಬ್ರಹ್ಮಾವರ ತಾಲೂಕುಗಳ ವತಿಯಿಂದ ‘ವರ್ಷದ ಹರ್ಷೋತ್ಸವ’ ಕಾರ್ಯಕ್ರಮ ಅಕ್ಟೋಬರ್ 4ರಂದು ಬೆಳಗ್ಗೆ 9.30ಕ್ಕೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಮಂತ್ರಣ ಉಡುಪಿ ಜಿಲ್ಲಾಧ್ಯಕ್ಷೆ ಪುಷ್ಪ ಪ್ರಸಾದ್ ವಹಿಸಲಿದ್ದಾರೆ. ದೀಪ ಪ್ರಜ್ವಲನೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.

ಮುಖ್ಯ ಅತಿಥಿಗಳಾಗಿ ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್, ಸುದ್ದಿಮನೆ ಪತ್ರಿಕೆಯ ಸಂಪಾದಕ ಹಾಗೂ ವ್ಯವಸ್ಥಾಪಕ, ಲೇಖಕ ಮತ್ತು ವಕೀಲರಾದ ರವಿಕುಮಾರ್ ಗಂಗೊಳ್ಳಿ, ಸಾಹಿತಿ ಹಾಗೂ ಗಾಯಕ ಪ್ರಕಾಶ್ ಸುವರ್ಣ ಕಟಪಾಡಿ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ಆಮಂತ್ರಣ ರಾಜ್ಯ ನಿರ್ದೇಶಕರಾದ ಆಶಾ ಅಡೂರು, ಭಾರತಿ ಪರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ವಿಂದ್ಯಾ ಎಸ್. ರೈ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಆಮಂತ್ರಣ ಉಡುಪಿ ಜಿಲ್ಲಾ ನಿರ್ದೇಶಕರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ ಕೋರಲಾಗಿದೆ.