ಉಡುಪಿ : ಗರುಡ ಗ್ಯಾಂಗ್ ಸಕ್ರಿಯ ಸದಸ್ಯನನ್ನು ಪೊಲೀಸರು ಗೂಂಡಾಕಾಯ್ದೆಯಡಿ ಬಂಧಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿ ನಿವಾಸಿ ಮಹಮ್ಮದ್ ಅಲ್ಫಾಜ್ (25 ) ಬಂಧಿತ ಆರೋಪಿ. ಈತನ ವಿರುದ್ದ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲಿ ಕೊಲೆಯತ್ನ- 2, ದರೋಡೆ- 1, ದರೋಡೆ ಯತ್ನ- 1, ಹಲ್ಲೆ- 1, ಅಕ್ರಮ ಕೂಟ -2, ಅಪಹರಣ-1, ಮಾದಕ ವಸ್ತು ಮಾರಾಟ-1, ಹಾಗೂ ಇತರ ಪ್ರಕರಣ-1 ಸೇರಿ ಒಟ್ಟು 10 ಪ್ರಕರಣ ದಾಖಲಾಗಿದೆ.
ಅವುಗಳ ಪೈಕಿ 1 ಪ್ರಕರಣ ಖುಲಾಸೆಯಾಗಿದ್ದು, 8 ಪ್ರಕರಣ ನ್ಯಾಯಾಲಯ ವಿಚಾರಣೆಯಲ್ಲಿದೆ. ಒಂದು ಪ್ರಕರಣ ತನಿಖೆಯಲ್ಲಿದೆ.

