ನಾಟ್ಯಮಯೂರಿ ನೃತ್ಯ ಟ್ರಸ್ಟ್ (ರಿ) ವಿರಾಜಪೇಟೆ ಕೊಡಗು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರಿಗೆ ರಾಷ್ಟ್ರದ ಪ್ರಥಮ ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾ ಪುಲೆಯವರ ಹೆಸರಿನಲ್ಲಿ ಕೊಡಮಾಡಲ್ಪಡುವ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಗೆ ನಿವೇದಿತಾ ಪ್ರೌಢಶಾಲೆ ಬಸ್ರೂರು ಇಲ್ಲಿಯ ಜನ ಮೆಚ್ಚಿನ ಅಧ್ಯಾಪಕರಾಗಿರುವ ಶ್ರೀ ಪ್ರದೀಪ ಕುಮಾರ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ.
ರವೀಂದ್ರ ಕಲಾ ಕ್ಷೇತ್ರ ಬೆಂಗಳೂರು ಇಲ್ಲಿಯ ನಯನಾ ಸಭಾ ಭವನದಲ್ಲಿ ಸಪ್ಟೆಂಬರ್ 27 ರಂದು ಗೌರವ ಪಡೆಯಲಿದ್ದಾರೆಂದು ತಿಳಿಸಲಾಗಿದೆ.

