ಅಕ್ಷಯ ಕಾಲೇಜು ಪುತ್ತೂರು : ವಾಣಿಜ್ಯವಿಭಾಗದ ವಿದ್ಯಾರ್ಥಿಗಳಿಗೆ ಕೈಕಾರಿಕಾ ಭೇಟಿ

0
13

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳೂರಿನ ಗುರುಚರಣ್ ಇಂಡಸ್ಟ್ರೀಸ್‌ಗೆ ಏಪ್ರಿಲ್ 21, 2026ರಂದು ಕೈಗಾರಿಕಾ ಭೇಟಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ನೈಜ ಕಾರ್ಯವಿಧಾನಗಳನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು.

ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ನೀಡಿ, ಉತ್ಪಾದನಾ ಪ್ರಕ್ರಿಯೆಗಳ ವಿವಿಧ ಹಂತಗಳನ್ನು ವಿವರಿಸಿದರು. ಪಿ.ಪಿ. ವಿಭಾಗದ ಸಹಾಯಕ ವ್ಯವಸ್ಥಾಪಕರಾದ ಸೈಫ್ ಹಾಗೂ ಎಚ್.ಎಂ. ವಿಭಾಗದ ಸಹಾಯಕ ವ್ಯವಸ್ಥಾಪಕರಾದ ಸಜಿತ್ ಅವರು ಕೈಗಾರಿಕೆಯ ಕಾರ್ಯವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಕಚ್ಚಾ ವಸ್ತುಗಳ ಸ್ವೀಕಾರದಿಂದ ಆರಂಭಿಸಿ ಅಂತಿಮ ಉತ್ಪನ್ನಗಳ ತಯಾರಿವರೆಗೆ ನಡೆಯುವ ಕ್ರಮಗಳನ್ನು ಹಂತ ಹಂತವಾಗಿ ತಿಳಿಸಲಾಯಿತು. ಜೊತೆಗೆ ಯಂತ್ರೋಪಕರಣಗಳ ಬಳಕೆ, ಸುರಕ್ಷತಾ ಕ್ರಮಗಳು ಹಾಗೂ ಗುಣಮಟ್ಟ ನಿಯಂತ್ರಣ ವಿಧಾನಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಯಿತು.

ವಿದ್ಯಾರ್ಥಿಗಳು ಕೈಗಾರಿಕಾ ವ್ಯವಸ್ಥಾಪನೆ, ಕಾರ್ಮಿಕರ ಕಾರ್ಯಪದ್ಧತಿ ಹಾಗೂ ಉತ್ಪಾದನಾ ನಿರ್ವಹಣೆಯ ಬಗ್ಗೆ ನೇರವಾಗಿ ತಿಳಿದುಕೊಂಡರು. ಕಾರ್ಯಕ್ರಮದ ವೇಳೆ ಅವರು ಕೇಳಿದ ಪ್ರಶ್ನೆಗಳಿಗೆ ಸಿಬ್ಬಂದಿ ಸಮರ್ಪಕವಾಗಿ ಉತ್ತರಿಸಿ, ಅವರ ಸಂಶಯಗಳನ್ನು ನಿವಾರಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಿಶೋರ್ ಕುಮಾರ್ ರೈ   ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಕು.ಮೇಘಶ್ರೀ, ರಾಕೇಶ್ ಉಪಸ್ಥಿತರಿದ್ದರು.

ಈ ಕೈಗಾರಿಕಾ ಭೇಟಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಜ್ಞಾನವನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದ್ದು, ಕೈಗಾರಿಕಾ ಕ್ಷೇತ್ರದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿತು.

LEAVE A REPLY

Please enter your comment!
Please enter your name here