ಉಜಿರೆ : ಉದ್ಯಮದಲ್ಲಿ ಯಶಸ್ಸು ಸಾಧಿಸಲು ನಿಷ್ಠೆ, ಪರಿಶ್ರಮ ಮತ್ತು ದೈರ್ಯ ಅತ್ಯಂತ ಅಗತ್ಯವೆಂದು ತಿಳಿಸಿದರು. ಡಾ.ಡಿವೀರೇಂದ್ರ ಹೆಗ್ಗಡೆ ಯವರು ದೂರದರ್ಶಿತ್ವದ ಈಸಂಸ್ಥೆಯಲ್ಲಿ ತರಬೇತಿ ಪಡೆದವರು ಸ್ವಉದ್ಯೋಗ ದತ್ತ ಮುಂದಾಗಿ ಆತ್ಮವಿಶ್ವಾಸದಿಂದ ಕರ‍್ಯನಿರ‍್ವಹಿಸಬೇಕು ಜೊತೆಗೆ ಒಂದಷ್ಟು ಜನರಿಗೆ ಉದ್ಯೋಗ ಒದಗಿಸಿ, ಗುಣಮಟ್ಟದ ವ್ಯವಹಾರ ನಡೆಸಿ ಎಂದು ಬೆಳ್ತಂಗಡಿಯ ಉದ್ಯಮಿ, ವಿನಾಯಕರೈಸ್ಮಿಲ್,ಮಾಲಕರು ಆದ ಶ್ರೀಕಾಂತ್ಕಾಮತ್ ಅಭಿಪ್ರಾಯಪಟ್ಟರು.

ಅವರು ರುಡ್ಸೆಟ್ಸಂಸ್ಥೆ, ಸಿದ್ಧವನ, ಉಜಿರೆ ವತಿಯಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನಶೀಲ ಕಾರ‍್ಯಕ್ರಮ (ಪಿ.ಎಂ.ಇ.ಜಿ.ಪಿ) ಅಡಿಯಲ್ಲಿ ಹಮ್ಮಿಕೊಂಡ ಉದ್ಯಮ ಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವುಮುಖ್ಯಅತಿಥಿಗಳಾಗಿ ಭಾಗವಹಿಸಿ, ಶಿಬಿರರ‍್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ,ಶುಭಹಾರೈಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಡ್ಸೆಟ್ಸಂಸ್ಥೆಗಳ ಕಾರ‍್ಯನಿರ‍್ವಾಹಕ ನಿರ‍್ದೇಶಕರಾದ ಬಿ.ಪಿ.ವಿಜಯಕುಮಾರ್, ಮಾತನಾಡಿ, ತರಬೇತಿಯ ಮೂಲಕ ಪಡೆದ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ ಉದ್ಯಮದಲ್ಲಿ ಬೆಳೆಯಬೇಕು ಎಂದುಪ್ರೇರೇಪಿಸಿದರು.
ನಂತರ ಸಂಸ್ಥೆಯ ನಿರ‍್ದೇಶಕರಾದ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿದರು, ಕಾರ‍್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಅಬ್ರಹಾಂಜೇಮ್ಸ್ ಅವರು ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕರುಣಾರ‍್ಕೆ ಜೈನ್ ಅವರು ಧನ್ಯವಾದರ‍್ಪಿಸಿದರು.
ಕಾರ‍್ಯಕ್ರಮವು ನದಿಯ ಮತ್ತು ಬಳಗದವರ ಪ್ರಾರ‍್ಥನೆಯೊಂದಿಗೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಮಹಮ್ಮದ್ಕುಂಞ್ಜ, ಅಮಿತಾ ಲೋಬೋ, ರಾಜೇಶ್ರೈ ತಮ್ಮ ತರಬೇತಿ ಅನುಭವ ಹಂಚಿಕೊಂಡರು.

