ಅಖಿಲ ಭಾರತ ದೈವರಾಧಾಕರ ಒಕ್ಕೂಟ (ರಿ ) ಕೇಂದ್ರೀಯ ಉಡುಪಿ ಜಿಲ್ಲೆ ಕಾರ್ಯಕಾರಿ ಸಮಿತಿಯ ಸಭೆಯು ದಿನಾಂಕ 21-07-2026 ರಂದು ಸಂಜೆ 5.30 ತೆಂಕುಪೇಟೆ ಬೊಬ್ಬರ್ಯ ದೈವಸ್ಥಾನದಲ್ಲಿ ಜರಗಿತ್ತು.
ಸ್ವಾಗತವನ್ನು ಸಂದೇಶ್ ಸುವರ್ಣ ರವರು ನೆರವೇರಿಸಿದರು. ಸಭೆ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ವಿನೋದ್ ಶೆಟ್ಟಿ ಅವರು ನೆರೆವೇರಿಸಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಒಕ್ಕೂಟದ ಪ್ರಮುಖ ಸದಸ್ಯರಾದ ಉದಯ ಮೆಂಡನ್ ಸಮಿತ ಶೆಟ್ಟಿ ದಿನೇಶ ಪೂಜಾರಿ ರಂಜಿತ್ ಶೇರಿಗಾರ ವಾಸು ಶೇರಿಗಾರ ಕೃಷ್ಣ ಪೂಜಾರಿ ಅಂಜಾರು ಶಶಿಧರ್ ಪೂಜಾರಿ ನವೀನ್ ಪಾತ್ರಿ ಕುಂಜಿಬೆಟ್ಟು ಶ್ಯಾಮ ರವಿ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ನಮ್ಮ ಉಡುಪಿ ಟಿವಿಯ ಪ್ರವರ್ತಕರಾದ ವಿನೋದ್ ಶೆಟ್ಟಿ ಅವರ ವತಿಯಿಂದ ಸನ್ಮಾನಿಸಲಾಯಿತು .
ಹಾಗೂ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ ಮಡಿವಾಳ ಅವರಿಗೆ ಗೌರವಿಸಲಾಯಿತು. ಈ ಒಂದು ಸಂಬಂಧದಲ್ಲಿ ಒಕ್ಕೂಟದ ನೂತನ ಘಟಕಗಳ ಸಭೆಯ ದಿನಾಂಕವನ್ನು ನಿರ್ಣಯ ಮಾಡಲಾಯಿತು. ಹಾಗೂ ಪುಣೆ ಘಟಕದ ಹಾಗೂ ಬೆಂಗಳೂರು ಘಟಕದ ಉದ್ಘಾಟನೆ ದಿನಾಂಕವನ್ನು ಚರ್ಚಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಕೆಲವೊಂದು ಸದಸ್ಯರು ಸದಸ್ಯತ್ವ ನೋಂದಣಿ ಮಾಡಿದರು.
ಹಾಗೂ ನವಂಬರ್ ತಿಂಗಳಲ್ಲಿ ನಡೆಯುವ ದೈವ ರಾಧಾಕರ ಬಬ್ಬು ಸ್ವಾಮಿ ದೈವಸ್ಥಾನ ಹಾಗೂ ಗರಡಿಗಳ ದೈವಸ್ಥಾನಗಳ ಸಮ್ಮಿಲನ ಸಮಾವೇಶದ ಬಗ್ಗೆ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ರಂಜಿತ್ ಶೇರಿಗಾರ ಅವರು ಧನ್ಯವಾದ ನೆರವೇರಿಸಿದರು. ಈ ಒಂದು ಸಂದರ್ಭದಲ್ಲಿ ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

