ದೇಶದ್ರೋಹ ಚಟುವಟಿಕೆ ಆರೋಪ: ಮುಸ್ಲಿಂ ಮಹಿಳೆ ವಿರುದ್ಧ ಮುಸ್ಲಿಂ ಮುಖಂಡರಿಂದಲೇ ದೂರು

0
91

ತುಮಕೂರು: ತುಮಕೂರು ಮೂಲದ ಇಶ್ರತ್ ಎಂಬುವರು ಪಾಕಿಸ್ತಾನ ಮೂಲದ ಸಂಘಟನೆ ಮೂಲಕ ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ತುಮಕೂರಿನ 150ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ದೂರು ನೀಡಿದ್ದಾರೆ.

ಎಂಎಫ್ಐ-ಮೆಹ್ದಿ ಫೌಂಡೇಶನ್​ನ ವಿಡಿಯೋಗಳ ಮೂಲಕ ಇಶ್ರತ್ ಸೂಫಿ ಪಂಥದ ತತ್ವ ಪ್ರಚಾರ ಮಾಡುತ್ತಿದ್ದಾರೆ. ವಿದೇಶ ಮೂಲದ ರಿಯಾಜ್ ಅಹ್ಮದ್ ಗೋಹರ್ ಶಾಹಿ ಎಂಎಫ್​ಐ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಇಂಗ್ಲೆಂಡ್​​ನಲ್ಲಿ ನೋಂದಣಿಯಾಗಿದೆ. ಮುಸ್ಲಿಂ ಸಮುದಾಯದ ಜನರನ್ನ ಒಡೆಯುವ ಕೆಲಸ ಹಾಗೂ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಶ್ರತ್​ ಪ್ರಚೋದನೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಶ್ರತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here