ಹೋಂ ಡಾಕ್ಟರ್ ಫೌಂಡೇಶನ್ – ದುಂದುವೆಚ್ಚ ರಹಿತ ದೀಪಾವಳಿ ಆಚರಣೆ 2026

0
9

ಮಲ್ಪೆ :- ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ )ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ದೀಪಾವಳಿ ಹಬ್ಬದ ಆಚರಣೆ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ 8 ಅಸಹಾಯಕ ರೋಗಿಗಳಿಗೆ 95 ಸಾವಿರ ರೂ. ಧನಸಹಾಯ ನೀಡಲಾಯಿತು.

ಬಳಿಕ ಹರಿದ ಬ್ಯಾಗ್, ಚಪ್ಪಲಿ ಬಳಸುತಿದ್ದ ಮಕ್ಕಳನ್ನೂ ಗುರುತಿಸಿ ತಲಾ 4,ಹೊಸ ಚಪ್ಪಲಿ ಹಾಗು ಬ್ಯಾಗ್ ಗಳನ್ನು ವಿತರಿಸಲಾಯಿತು.ನಂತರ ಸ್ವರ್ಗ ಆಶ್ರಮ ದಲ್ಲಿ ಇತ್ತೀಚಿಗೆ ನಡೆದ ಬೆಂಕಿ ರಹಿತ ಸ್ಪರ್ಧೆಯ ವಿಜೇತರಿಗೆ ಮತ್ತು ಭಗವಹಿಸಿದವರಿಗೆ ಬಹುಮಾನ, ಸ್ವರ್ಗ ಆಶ್ರಮದ ಆಶ್ರಮವಾಸಿಗಳಿಗೆ 40 ವಿಶೇಷ ಬಟ್ಟಲು ಗಳನ್ನು ನೀಡಲಾಯಿತು.. ಮೇಸ್ತ್ರಿ ಗಳೇ ದೇವರಾಗೋಣ ಕಾನ್ಸೆಪ್ಟ್ ನಲ್ಲಿ ಸೇವೆ ಸಲ್ಲಿಸಿದ 23 ಮೇಸ್ತ್ರಿ ಗಳಿಗೆ ರೂ 1 ಲಕ್ಷದ ಬಾಂಡ್ ಗಳನ್ನು ಹಾಗೂ ಶಾಲೆಗೆ ಸ್ಯಾನಿಟರಿ ಪ್ಯಾಡ್ ಬರ್ನರ್ ಮಿಷಿನ್ ನೀಡಲಾಯಿತು.

ಕಾರ್ಕಳದ ವಿಜೇತ ಶಾಲೆಯ ವಿಶೇಷ ಚೇತನ ಮಕ್ಕಳು ಹಾಗು ಮೂಡುಬಿದರೆ ಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ಹಣತೆ ಹಚ್ಚಿ ದೀಪಾವಳಿ ಆಚರಿಸಲಾಯಿತು ಶಾಲಾ ಮಕ್ಕಳಿಗೆ ಕ್ವಿಸ್ ಕಾರ್ಯಕ್ರಮ ಸೇರಿದಂತೆ ಮನೋರಂಜನ ಕಾರ್ಯಕ್ರಮ ನಡೆಯಿತು ಅದೇ ರೀತಿ ಮಕ್ಕಳೊಂದಿಗೆ ಸಹ ಭೋಜನ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ,ಡಾ. ಸುಮಾ ಎಸ್ ಶೆಟ್ಟಿ ಶಾಲಾ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಫೌಂಡೇಶನ್ ನ ಸದಸ್ಯರು ಭಾಗವಹಿಸಿದ್ದರು. ವಾಣಿಶ್ರೀ ಗೋವಿಂದ ಭಂಡಾರಿ ನಿರೂಪಿಸಿದರು.