ಆಳ್ವಾಸ್ ಹೋಮಿಯೋಪತಿ ಪ್ರೊವೇನಿಯೊ 2 ಉದ್ಘಾಟನೆ

0
158

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ರಾಷ್ಟ್ರೀಯ ಹೋಮಿಯೋಪತಿ ಕಾನ್ಫರೆನ್ಸ್ ಪ್ರೊವೇ ನಿಯೋ 2 ಸಪ್ಟಂಬರ್ 19ರಂದು ವಿದ್ಯಾಗಿರಿಯ ಕೃಷಿ ಸಿರಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.

ಎರಡು ದಿನಗಳ ಈ ರಾಷ್ಟ್ರೀಯ ಹೋಮಿಯೋಪತಿ ಕಾನ್ಫರೆನ್ಸ್ ಉದ್ಘಾಟನೆಯನ್ನು ಡಾ. ಎಂಎಲ್ ಧವಲೆ ಸ್ಮಾರಕ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ನವದೆಹಲಿ ಸಿಸಿ ಆರ್ ಎಚ್ ಸೈಂಟಿಫಿಕ್ ಅಡ್ವೈಸರ್ ಬೋರ್ಡ ನ ಚೇರ್ಮನ್ ಡಾ. ಕುಮಾರ್ ಮಿತ್ರ ಚಂದ್ರ ದವಲೆ ಹಾಗೂ ದ ಕ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಕೆ ಅವರು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಮೋಹನ್ ಆಳ್ವ ಮಾತನಾಡಿ, ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಭಾರತ ದೇಶದಲ್ಲಿ ಆರೋಗ್ಯಕ್ಕೆ ಉತ್ತಮ ರೀತಿಯ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯತೆ ಇದೆ. ವಿದ್ಯಾರ್ಥಿಗಳು ಸಂಶೋಧನೆಯ ಮೂಲಕ ಸಮರ್ಪಕವಾದ ಔಷಧಿಗಳನ್ನು ಖಾಯಿಲೆಗೆ ಕಂಡು ಹುಡುಕುವ ಗುರುತರ ಹೊಣೆಗಾರಿಕೆ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯ ಇದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಪುತ್ತಿಗೆಯ ಅಡಿಗಳ್ ಅನಂತ ಕೃಷ್ಣ ಭಟ್, ಅಕ್ಷಯ್ ಕೆ ಜೈನ್, ಅಮರ್ ಕೋಟೆ, ಭಾರವಿ ಸುರತ್ಕಲ್, ಹಾಗೂ ಧರ್ಮೇಂದ್ರ ಕುಮಾರ್ ಹೊಸಂಗಡಿ ಅವರುಗಳನ್ನು ಅವರ ಅತ್ಯಪೂರ್ವ ಮಾನವ ಸೇವೆಯ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ ಉಪಾಧ್ಯಾಯ, ಕಲ್ಲಿಕೋಟೆಯ ಮನ್ಸೂರ್ ಅಲಿ, ವೈಭವ್ ಜೈನ್ ಇತ್ಯಾದಿಯರು ಹಾಜರಿದ್ದರು. ದೇಶವಿದೇಶದ ನೂರಾರು ರಿಸರ್ಚ್ ಹಾಗೂ ಹೋಮಿಯೋಪತಿ ಡಾಕ್ಟರ್ ಗಳು ಸಮ್ಮೇಳನದ ಪ್ರಯೋಜನ ಪಡೆಯಲು ಹಾಜರಿದ್ದರು.

ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ

LEAVE A REPLY

Please enter your comment!
Please enter your name here