ಸೆ. 21ರಂದು ಜೆಪ್ಪುವಿನಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ

0
108

ಮಂಗಳೂರು: ನಗರದ ರಿಕ್ಷಾ ಚಾಲಕರಿಗಾಗಿ ಮ್ಯಾಕೋ ಸೊಸೈಟಿ ವತಿಯಿಂದ ಉಚಿತ ಕಣ್ಣಿನ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ದಿನಾಂಕ: 21-09-2025ರಂದು ಹಮ್ಮಿಕೊಳ್ಳಲಾಗಿದೆ.ಎಂದು ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರು ತಿಳಿಸಿರುತ್ತಾರೆ.

ದಿನಾಂಕ: 21-09-2025ರಂದು ಮಂಗಳೂರು ನಗರದ ಸೈಂಟ್‌ ಜೋಸೆಫ್‌ ಸೆಂಟನರಿ ಮೆಮೊರಿಯಲ್‌ ಹಾಲ್‌ ಜೆಪ್ಪು ಇದರಲ್ಲಿ ಬೆಳಿಗ್ರೆ 8:00 ಗಂಟೆಯಿಂದ ಮದ್ಯಾಹ್ನ 12:30 ರವರೆಗೆ ಸುಮಾರು  ರಿಕ್ಷಾ ಚಾಲಕರಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ ಕಣ್ಣಿನ ಪರೀಕ್ಷೆ ಕಣ್ಣಿನ ಸಮಸ್ಯೆಗಳಿದ್ದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಟೋ ರಿಕ್ಷಾಚಾಲಕರು ಭಾಗವಹಿಸಬೇಕಾಗಿ ಈ ಮೂಲಕ ಐವನ್‌ ಡಿʼಸೋಜಾ ತಿಳಿಸಿದ್ದಾರೆ.

ಭಾಗವಹಿಸುವ ಸಂರ್ಧರ್ಭದಲ್ಲಿ ಪ್ರತಿಯೊಬ್ಬರು ಆಧಾರ್‌ಕಾರ್ಡ್‌ ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಣ್ಣಿನ ಪರಿಕ್ಚೆಯನ್ನು ಮಾಡಿಕೊಳ್ಳುವುದು ಅತ್ಯಂತ ಸೂಕ್ತ ಮತ್ತು ಇತ್ತೀಚೆಗೆ ಉಂಟಾದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹುಡುಕಬೇಕಾಗಿ ಐವನ್‌ ಡಿʼಸೋಜಾರವರು ವಿನಂತಿಸಿದ್ದಾರೆ. ಈ ಶಿಬಿರವು ಎ.ಜೆ ಆಸ್ಪತ್ರೆ ಮಹಾವಿದ್ಯಾಲಯಕಣ್ಣಿನ ವಿಭಾಗವತಿಯಿಂದ ನಡೆಯಲಿದ್ದು  ಬೆಳಿಗ್ಗೆ 8.00ಗಂಟೆಗೆ ಈ ಒಂದು ಕಾರ್ಯಕ್ರಮ ಪ್ರಾರಂಭವಾಗುವುದು ಮೊದಲು ಬಂದವರಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುವುದು, ಹಾಗೂ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಎಂದು ಐವನ್‌ ಡಿʼಸೋಜಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here