ಅಮಾಸೆಬೈಲು: ಆಮಂತ್ರಣ ನೀಡಲು ಮನೆಗೆ ಬಂದ ಮಹಿಳೆಗೆ ಕಿಸ್!;‌ ಕೇಸ್‌ ಬುಕ್!

0
257

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಅಮಾಸೆಬೈಲು ಎಂಬಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಲೈಂಗಿಕ ‌ಕಿರುಕುಳ ನೀಡಿದ ಆರೋಪಿ ನವೀನಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧಿಸಿದಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಧರ್ಮಸ್ಥಳದಲ್ಲಿನ ಧರ್ಮ ಸಂರಕ್ಷಣಾಯಾತ್ರೆಯ ಬಗ್ಗೆ ಅಮಾಸೆಬೈಲು ರಟ್ಟಾಡಿ ಶ್ರೀ ರಟ್ಟೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮುಖ್ಯಸ್ಥರಿಗೆ ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿರುವ ಅವರ ಮನೆಗೆ ತೆರಳಿದ್ದರು ಎನ್ನಲಾಗಿದೆ.

ಕುರ್ಚಿಯಲ್ಲಿ ಕುಳಿತ್ತಿದ್ದ ವ್ಯವಸ್ಥಾಪನ ಸಮಿತಿ ಮುಖ್ಯಸ್ಥರು ಕರೆಯೋಲೆಯನ್ನು ಪಡೆದುಕೊಂಡಾಗ ಸೇವಾಪ್ರತಿನಿಧಿಯ ಕೈಯನ್ನು ಸ್ವರ್ಶಿಸಿ ಆಹ್ವಾನ ಪತ್ರಿಕೆ ಪಡೆದುಕೊಂಡಿದ್ದು,

ಮಾತ್ರವಲ್ಲದೆ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿ ಕುಳಿತ್ತಿದ್ದ ಸೋಪಾದ ಪಕ್ಕದಲ್ಲಿ ಬಂದು ಕುಳಿತು ಎಡಭಾಗದ ತೋಳಿನಿಂದ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡು ಬಲತ್ಕಾರವಾಗಿ ಬಲ ಕೆನ್ನೆಗೆ ಮುತ್ತು ಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

LEAVE A REPLY

Please enter your comment!
Please enter your name here