ಅಂಬೂರಿ ಗೊಂದೊಲುಕಟ್ಟೆ ಶ್ರೀ ಮಹಮ್ಮಾಯೀ ದೇವಸ್ಥಾನ

0
10

ಭಜನಾ ಮಂಡಳಿಯ ಸದಸ್ಯರಿಗೆ ಪುಸ್ತಕ ಛತ್ರಿ ವಿತರಣೆ

ಮೂಡುಬಿದಿರೆ : ಅಂಬೂರಿ ಗೊಂದೊಲು ಕಟ್ಟೆ ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಇತ್ತೀಚಿಗೆ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಂಡ ಸಂದರ್ಭದ ಕಾರ್ಯಕ್ರಮದಲ್ಲಿ ಶ್ರೀ ಮಹಮ್ಮಾಯಿ ಕುಣಿತ ಭಜನಾ ಮಂಡಳಿಯ 40 ಮಂದಿ ಸದಸ್ಯರಿಗೆ ದಾನಿಗಳ ಸಹಾಯದಿಂದ ಪುಸ್ತಕ ಪೆನ್ನು ಅಡಿಕೋಲು ಸಹಿತ ಛತ್ರಿಗಳನ್ನು ವಿತರಿಸಲಾಯ್ತು.

ಛತ್ರಿಗಳನ್ನು ಕೊಡುಗೆಯಾಗಿ ನೀಡಿದ ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಬನ್ನಡ್ಕ ಸಾರ್ವಜನಿಕ ಶ್ರೀ ಶಾರಾದೋತ್ಸವ ಟ್ರಸ್ಟ್(ರಿ )ನ ಅಧ್ಯಕ್ಷರೂ ಆದ ದಯಾನಂದ ಪೈಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಗೂ ಕೊಡುಗೆಗಳನ್ನು ವಿತರಿಸಿ ಮಾತನಾಡುತ್ತಾ ಇತ್ತೀಚಿಗೆ ತೀರಾ ಗ್ರಾಮೀಣ ಪ್ರದೇಶವಾದ ಅಂಬೂರಿಯಲ್ಲಿ ಜೆಲ್ಲೆಯಾದ್ಯOತ 50 ಕ್ಕೂ ಹೆಚ್ಚಿನ ಭಜನಾ ತಂಡಗಳಿಂದ ಯಶಸ್ವಿಯಾಗಿ ನೆರವೇರಿದ ಭಜನಾಮ್ರತ ಕಮ್ಮಟದ ರೂವಾರಿ ಇಲ್ಲಿನ ಶ್ರೀ ಮಹಮ್ಮಾಯೀ ಕುಣಿತ ಭಜನಾ ಮಂಡಳಿಯ ಸಂಚಾಲಕರಾದ ದಿನಕರ ಕುಲಾಲರವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು .ಹಾಗೂ ಈ ನಿಟ್ಟಿನಲ್ಲಿ ಅಲಂಗಾರಿನ ಯುವ ಉದ್ಯಮಿ ಭರತ್ ಶೆಟ್ಟಿ ಸಹಿತ ಊರವರ ಸಹಕಾರವನ್ನು ಕೂಡ ಈ ಸಂದರ್ಭದಲ್ಲಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅಂಬೂರಿ ಶ್ರೀ ಮಹಮ್ಮಾಯೀ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಚಂದ್ರ ಅಂಬೂರಿ, ಭಜನಾ ಮಂಡಳಿಯ ಸಂಚಾಲಕ ದಿನಕರ ಕುಲಾಲ್, ಜೊತೆ ಕಾರ್ಯದರ್ಶಿ ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here