ಮೂಡುಬಿದಿರೆ : ದರೆಗುಡ್ಡೆ ಗುರುಬೆಟ್ಟು ಶ್ರೀ ನಿಲಯದ ದಿನೇಶ್ ಪೂಜಾರಿ ಮತ್ತು ನಳಿನಿ ದಂಪತಿಯ ಪುತ್ರಿ ಅನ್ವಿತಾ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 86 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸರಕಾರಿ ಪ್ರೌಢಶಾಲೆ, ದರೆಗುಡ್ಡೆಯ ವಿದ್ಯಾರ್ಥಿನಿಯಾಗಿರುವ ಅನ್ವಿತಾ, ತನ್ನ ಶ್ರಮ ಮತ್ತು ನಿರಂತರ ಪರಿಶ್ರಮದ ಮೂಲಕ ಈ ಯಶಸ್ಸನ್ನು ಸಾಧಿಸಿದ್ದಾರೆ.
ಅನ್ವಿತಾ ಅವರ ಈ ಸಾಧನೆಗೆ ಶಾಲಾ ಶಿಕ್ಷಕರು, ಹಿತೈಷಿಗಳು ಹಾಗೂ ಕುಟುಂಬ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಮುಂದಿನ ಶಿಕ್ಷಣ ಜೀವನದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಲಾಗಿದೆ.

