Tuesday, April 22, 2025
Homeಉಡುಪಿಏ.8-9: ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ “ಪ್ರಥಮ ಹರಕೆ ಮಾರಿಪೂಜೆ"

ಏ.8-9: ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ “ಪ್ರಥಮ ಹರಕೆ ಮಾರಿಪೂಜೆ”

ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.)ಮಹಾಮಾತೆ ಕಾಪು ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಈಗಾಗಲೇ ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಜರುಗಿದೆ. ಇದೀಗ ಸುಗ್ಗಿ ಮಾರಿಪೂಜೆ ನಂತರ ಪ್ರಥಮ ಹರಕೆಯ ಮಹಾಸೇವೆಯಾಗಿ ದೇವಳದ ಎಲ್ಲಾ ಸಮಿತಿಗಳು ಜಂಟಿಯಾಗಿ ಅಮ್ಮನ ನೂತನ ದೇಗುಲದಲ್ಲಿ ಅಮ್ಮನ ಮಕ್ಕಳ ಕೂಡುವಿಕೆಯಲ್ಲಿ ಸಲ್ಲಿಸಲಿರುವ ವಿಜೃಂಭಣೆಯ “ಪ್ರಥಮ ಹರಕೆ ಮಾರಿಪೂಜೆ” ದಿನಾಂಕ 2025 ರ ಏಪ್ರಿಲ್ 8 ಮತ್ತು 9 ಜರಗಲಿದೆ.

ವಿಶೇಷ ಸೂಚನೆ : ಏಪ್ರಿಲ್ 8ರ ಮಂಗಳವಾರ 5 ಗಂಟೆಗೆ ಹೂ – ಹಿಂಗಾರ ಮೆರವಣಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿದಾನದಿಂದ ಹೊರಡಲಿದೆ. ಮಲ್ಲಿಗೆ – ಹಿಂಗಾರ- ಕೆಂಬಣ್ಣದ ಗುಲಾಬಿಯಿಂದ ಮಾರಿಯಮ್ಮ ಅಲಂಕಾರಗೊಳ್ಳಲಿದ್ದು, ಅಲಂಕಾರ ವಸ್ತುಗಳನ್ನು ನೀಡಲು ಇಚ್ಛಿಸುವ ಭಕ್ತರು ಮದ್ಯಾಹ್ನ 3 ಗಂಟೆಯ ಒಳಗಾಗಿ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿದಾನಕ್ಕೆ ತಲುಪಿಸಬೇಕಾಗಿ ವಿನಂತಿಸಲಾಗಿದೆ.

ಅದೇ ರೀತಿಯಾಗಿ ಹರಕೆಯ ಊರಿನ ಕೋಳಿಯ ಬಾಬು ರೂಪಾಯಿ 999 ಮತ್ತು ಹರಕೆಯ ಕುರಿ ನೀಡುವುದಿದ್ದರೆ ಮುಂಗಡವಾಗಿ ಕಚೇರಿಗೆ ತಿಳಿಸಿ ರೂಪಾಯಿ 9,999 ಅನ್ನು ಪಾವತಿಸಬೇಕೆಂದು ವಿನಂತಿ.

ಏಪ್ರಿಲ್ 8ರ ಮಂಗಳವಾರ ಸಂಜೆ 5 ಗಂಟೆಗೆ ಸರಿಯಾಗಿ ಜರಗಲಿರುವ ಹೂ – ಹಿಂಗಾರ ಮೆರವಣಿಗೆಯಲ್ಲಿ ಮತ್ತು ರಾತ್ರಿ 8:30ಕ್ಕೆ ರಜತ ರಥದಲ್ಲಿ ಅಮ್ಮ ಆಗಮಿಸುವ ಸಂದರ್ಭದಲ್ಲಿ ಭಾಗಿಯಾಗಿ ಅಮ್ಮನ ಕೃಪೆಗೆ ಪಾತ್ರರಾಗಿರಿ. ಏಪ್ರಿಲ್ 9ರ ಬುಧವಾರ ಸಂಜೆ 7ರಿಂದ ರಾತ್ರಿ 10ರ ವರೆಗೆ ಮಾರಿಪೂಜೆಯ ಅನ್ನಪ್ರಸಾದ ನಡೆಯಲಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕ ಸಂಖ್ಯೆ : 9964144593, 9844749993

RELATED ARTICLES
- Advertisment -
Google search engine

Most Popular